ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮಾಡಾಳ್ ವಿರುದ್ಧ ಮತ್ತೆ ಎರಡು ಎಫ್ ಐ ಆರ್ ದಾಖಲಾಗಿದೆ.
ಪಿಸಿ ಆಕ್ಟ್ ಅಡಿ ಲೋಕಾಯುಕ್ತ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದು, ಲೋಕಾಯುಕ್ತ ಇನ್ಸ್ ಪೆಕ್ಟರ್ ಕುಮಾರಸ್ವಾಮಿಯವರಿಂದ ಎಫ್ ಐ ಆರ್ ದಾಖಲಾಗಿದೆ.
ಮಾರ್ಚ್ 2ರಂದು ನಡೆದ ಲೋಕಾಯುಕ್ತ ದಾಳಿಯಲ್ಲಿ 2 ಕೋಟಿ ಹಣ ಪತ್ತೆಯಾಗಿದ್ದು, ಶ್ರೇಯಸ್ ಕಶ್ಯಪ್ ಕಂಪನಿಯಿಂದ 40 ಲಕ್ಷ ಲಂಚ ಪಡೆಯುವಾಗ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ಬೆನ್ನಲ್ಲೇ ಕ್ರೆಸೆಂಟ್ ರಸ್ತೆಯ ಕಾಸಗಿ ಕಚೇರಿಯಲ್ಲಿ 1.60 ಲಕ್ಷ ರೂ ಪತ್ತೆ, ಅರೋಮಾಸ್ ಕಂಪನಿಯ ನಿಕೋಲಸ್ ಬಳಿ 45 ಲಕ್ಷ ಹಾಗೂ ಗಂಗಾಧರ್ ಬಳಿ 45 ಲಕ್ಷ ಪತ್ತೆ ಮತ್ತು ಮಾಡಾಳು ಸಂಬಂಧಿ ಸುರೇಂದ್ರ ಬಳಿ 60 ಲಕ್ಷ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಮತ್ತೆ ಎರಡು ಕೇಸ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.