ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಬಿಬಿಸಿ ಸಾಕ್ಷ್ಯ ಚಿತ್ರ ಸಂಪೂರ್ಣ ಉತ್ಪ್ರೇಕ್ಷಿತ ಹಾಗೂ ಆಧಾರ ರಹಿತ ಎಂದು ಬ್ರಿಟನ್ ಸಂಸದ ಬಾಬ್ ಬ್ಲಾಕ್ ಮ್ಯಾನ್ ತಿಳಿಸಿದ್ದಾರೆ.
ಮಂಗಳವಾರದಂದು ನ್ಯೂಸ್ 18 ಜೊತೆ ಮಾತನಾಡಿದ ಅವರು, ಬಿಬಿಸಿ ಸುದ್ದಿ ಸಂಸ್ಥೆ, ಬ್ರಿಟನ್ ಸರ್ಕಾರವನ್ನು ಪ್ರತಿನಿಧಿಸುವುದಿಲ್ಲ. ಅಲ್ಲದೆ ಈ ಸಾಕ್ಷ್ಯ ಚಿತ್ರ ಕಳಪೆ ಪತ್ರಿಕೋದ್ಯಮ ಹಾಗೂ ಕಳಪೆ ಸಂಶೋಧನೆಯಿಂದ ಕೂಡಿದೆ ಎಂದು ಹೇಳಿದ್ದಾರೆ.
ಭಾರತ, ಬ್ರಿಟನ್ ಸ್ನೇಹಿತ ರಾಷ್ಟ್ರವಾಗಿದ್ದು, ಬಿಬಿಸಿ ಸಾಕ್ಷ್ಯ ಚಿತ್ರದಿಂದ ಉಭಯ ದೇಶಗಳ ಬಾಂಧವ್ಯಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
https://twitter.com/CNNnews18/status/1625373702090293248?ref_src=twsrc%5Etfw%7Ctwcamp%5Etweetembed%7Ctwterm%5E1625373702090293248%7Ctwgr%5E618326c2905fd6d2f82b6ce5e00464ce838720aa%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fpoorjournalismbadlyresearchedukmpsaysbbcfilmonmodidoesntrepresentgovtsview-newsid-n471471552