BIG NEWS: `ನಕಲಿ ಜಾಬ್ ಕಾರ್ಡ್’ ಹೊಂದಿರುವವರಿಗೆ ಬಿಗ್ ಶಾಕ್…..!

ಧಾರವಾಡ : ನಕಲಿ ಜಾಬ್ ಕಾರ್ಡ್ (Fake job card) ಹೊಂದಿರುವವರಿಗೆ ಸಚಿವ ಸಂತೋಷ್ ಲಾಡ್ (Minister Santosh Lad) ಬಿಗ್ ಶಾಕ್ ನೀಡಿದ್ದು, ಶೀಘ್ರವಲೇ ನಕಲಿ ಜಾಬ್ ಕಾರ್ಡ್ ಪತ್ತೆ ಹಚ್ಚಿ ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ನಕಲಿ ಜಾಬ್ ಕಾರ್ಡ್ ಇರುವ ಬಗ್ಗೆ ಮಾಹಿತಿ ಬೇಕು. ನಕಲಿ ಜಾಬ್ ಕಾರ್ಡ್ಗೆ ಕೆಲವು ಮಾನದಂಡ ಹಾಕಿದ್ದೇವೆ. ನಕಲಿ ಎಂದು ಗೊತ್ತಾದರೆ ಅದನ್ನು ತೆಗೆಯುತ್ತೇವೆ ಎಂದು ಹೇಳಿದ್ದಾರೆ.

ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಒಟ್ಟಾರೆ ನಮ್ಮ ಉದ್ದೇಶ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ವಿಶೇಷವಾಗಿ ನಮ್ಮ ಗಮನ ಆ ಕಡೆ ಇರುತ್ತದೆ. ಚುನಾವಣಾ ಸಮಯದಲ್ಲಿ ನಾವು ಏನು ಭರವಸೆಗಳನ್ನು ಕೊಟ್ಟಿದ್ದೆವೋ ಅವುಗಳನ್ನು ಈಡೇರಿಸುವುದೇ ನಮ್ಮ ಗುರಿ. ಕೊಟ್ಟ ಮಾತುಗಳನ್ನು ನಾವು ಕಾರ್ಯರೂಪಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read