ಕೋಲಾರ: ಇತ್ತೀಚಿನ ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ನಕಲಿ ಕ್ಲಿನಿಕ್ ಗಳು ತಲೆ ಎತ್ತಿದ್ದು, ಇಂತಹ ಕ್ಲಿನಿಕ್ ಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಸಮರ ಸಾರಿದ್ದಾರೆ. ಕೋಲಾರದ ಹಲವೆಡೆಗಳಲ್ಲಿ ನಕಲಿ ಕ್ಲಿನಿಕ್ ಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಕೋಲಾರದ ಚಿಟ್ನಹಳ್ಳಿ, ಶೆಟ್ಟಿಮಾದಮಂಗಲ, ಮದನಹಳ್ಳಿ ಕ್ರಾಸ್ ಬಳಿಯ ಕ್ಲಿನಿಕ್, ಗೋಕುಲ್ ಕ್ಲಿನಿಕ್, ವೆಂಕಟೇಶ್ವರ ಕ್ಲಿನಿಕ್, ಆನಂದ್ ಕ್ಲಿನಿಕ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು, ಸಿಬ್ಬಂದಿಗಳು ಸಂಬಂಧಿಸಿದ ದಾಖಲೆಗಳನ್ನು ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಕ್ಲಿನಿಕ್ ಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.