ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಸರ್ಕಾರದ ವತಿಯಿಂದ ಯಾರೂ ಹೋಗಿಲ್ಲ ಎಂಬ ಆರೋಪ ಕೇಳಿಬಂದಿದೆ. ದುರಂತ ಸಂಭವಿಸಿದಾಗ ಮೊದಲು ಭೇಟಿ ಕೊಟ್ಟಿದ್ದೇ ನಾನು. ನಾನು ಸರ್ಕಾರದ ಭಾಗವಲ್ಲವೇ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಚಾಮರಾಜನಗರದಲ್ಲಿ ದುರಂತವಾದಾಗ ಮೊದಲು ಭೇಟಿ ನೀಡಿದ್ದು ನಾನು. ಬಳಿಕ ಸುರೇಶ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ನಾವು ಹೋದರೆ ಸರ್ಕಾರ ಹೋದಂತೆ ಅಲ್ಲವೇ ? ನಾವೆಲ್ಲ ಸರ್ಕಾರದ ಭಾಗವಲ್ಲವೇ ? ಬೇರೆಯವರಿಂದ ಹೇಳಿಸಿಕೊಂಡು ಕೆಲಸ ಮಾಡಬೇಕಿಲ್ಲ. ನನಗೆ ಅಂತಹ ಅನಿವಾರ್ಯತೆ ಇಲ್ಲ ಎಂದು ತಿರುಗೇಟು ನೀಡಿದರು.
BIG NEWS: ರಮೇಶ್ ಜಾರಕಿಹೊಳಿ ಸಿಡಿ ಕೇಸ್; ಎಸ್ಐಟಿ ತನಿಖೆ ಮುಗಿಯುತ್ತಿದ್ದಂತೆ ಸ್ಫೋಟಕ ಟ್ವಿಸ್ಟ್…!
ಬೇರೆ ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ನಾನು ಹೇಳಿಕೆಗಳನ್ನು ನೀಡಲ್ಲ. ಆದರೆ ಕಾರಿಡಾರ್ ಗಳಲ್ಲಿ ಮಲಗಿಸಿ ಚಿಕಿತ್ಸೆ ಕೊಟ್ಟ ಉದಾಹರಣೆಗಳಿವೆ. ನಮ್ಮ ರಾಜ್ಯದಲ್ಲಿ ಆಗಿರೋ ಕೆಲಸಗಳ ಬಗ್ಗೆ ಹೆಮ್ಮೆ ಇರಲಿ ಎಂದು ಟಾಂಗ್ ನೀಡಿದರು.