ಮಂಗಳೂರು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಮತ್ತೋರ್ವ ವೈದ್ಯ ಹಾಗೂ ವೈದ್ಯಕೀಯ ವಿದ್ಯಾರ್ಥಿ ಇಬ್ಬರನ್ನು ಬಂಧಿಸಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಡಾ.ಬಾಲಾಜಿ (29) ಹಾಗೂ ಪಿಜಿ ವಿದ್ಯಾರ್ಥಿ ಡಾ.ರಾಘವ ದತ್ತಾ ಬಂಧಿತ ಆರೋಪಿಗಳು.
ಬಂಧಿತ ಡಾ.ಬಾಲಾಜಿ ಬೆಂಗಳೂರಿನ ಹಲಸೂರು ಮೂಲದವರಾಗಿದ್ದು, ಪಿಜಿ ವಿದ್ಯಾರ್ಥಿ ರಾಘವ ಆಂಧ್ರಪ್ರದೇಶ ಮೂಲದವರೆಂದು ತಿಳಿದುಬಂದಿದೆ.