ಬೆಂಗಳೂರು: ಹಿಂದಿನ ಯಾವುದೇ ಸರ್ಕಾರಗಳು ಮನೆ ಕೊಡುವ ದಿಟ್ಟ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಮನೆಗಾಗಿ ಅರ್ಜಿ ಕೊಟ್ಟಾಗ ಬರೀ ಕಾನೂನಿನ ತೊಡಕಿನ ಬಗ್ಗೆ ಹೇಳುತ್ತಿದ್ದರು. ಆದರೆ ಮನೆ ಕೊಡುವ ದಿಟ್ಟ ನಿರ್ಧಾರ ಕೈಗೊಂಡಿದ್ದು ನಮ್ಮ ಸರ್ಕಾರ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾನೂನು ತಂದು ಬಗೆಹರಿಸಬೇಕು. ಅಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಕೇವಲ ಘೋಷಣೆಯಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಕೆಲವರು ಸಾಮಾಜಿಕ ನ್ಯಾಯ ಎಂದು ಕೇವಲ ಘೋಷಣೆ ಮಾಡಿ ಯಾಮಾರಿಸಬಹುದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಡವರಾಗಿ ಹುಟ್ಟುವಂತದ್ದು ಆಕಸ್ಮಿಕ. ಆದರೆ ಬಡವರಾಗಿಯೇ ಈ ಭೂಮಿ ಬಿಡುವುದು ಅನ್ಯಾಯ. ಬಡ ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳಿದರು.