BIG NEWS: ಕೇಂದ್ರದ ಎಚ್ಚರಿಕೆಗೆ ಮಣಿದ ವಾಟ್ಸಾಪ್; ಅಂತರಾಷ್ಟ್ರೀಯ SPAM ಕರೆಗಳಿಗೆ ನಿರ್ಬಂಧ

ಸಾಮಾಜಿಕ ಜಾಲತಾಣ ವಾಟ್ಸಾಪ್ ಭಾರತೀಯ ಬಳಕೆದಾರರಿಗೆ ಇಂಡೋನೇಷ್ಯಾ, ವಿಯೆಟ್ನಾಂ, ಮಲೇಶಿಯಾ, ಇಥಿಯೋಪಿಯಾ ಸೇರಿದಂತೆ ಹಲವು ದೇಶಗಳಿಂದ ಸ್ಪ್ಯಾಮ್ ಕರೆಗಳು ಬರುತ್ತಿದ್ದು, ಈ ಹೆಚ್ಚಿನ ಕರೆಗಳು +251 (ಇಥಿಯೋಪಿಯಾ), +62 (ಇಂಡೋನೇಷ್ಯಾ), +254 (ಕೀನ್ಯಾ), +84 (ವಿಯೆಟ್ನಾಂ) ಮೊದಲಾದ ದೇಶಗಳ ಕೋಡ್ ಹೊಂದಿರುತ್ತದೆ. ಈ ಕರೆಗಳು ಬಹುತೇಕ ವಂಚಕರ ಜಾಲ ಎಂದು ಹೇಳಲಾಗುತ್ತದೆ.

ಹೀಗಾಗಿ ಮೆಟಾ ಒಡೆತನದ ವಾಟ್ಸಾಪ್ ಭಾರತೀಯ ಬಳಕೆದಾರರ ಸುರಕ್ಷತೆಗಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ವಾಟ್ಸಾಪ್ ಸಂಸ್ಥೆಗೆ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತೀಯ ಬಳಕೆದಾರರ ಗೌಪ್ಯ ಮಾಹಿತಿಯನ್ನು ಸಂರಕ್ಷಿಸಲು ಹಾಗೂ ಸುರಕ್ಷತೆಯನ್ನು ಖಾತರಿಪಡಿಸಲು ವಾಟ್ಸಾಪ್ ಮುಂದಾಗಿದೆ.

ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸುರಕ್ಷತಾ ವ್ಯವಸ್ಥೆಗಳನ್ನು ಹೆಚ್ಚಿಸುವುದಾಗಿ ವಾಟ್ಸಾಪ್ ಗುರುವಾರ ಹೇಳಿಕೊಂಡಿದ್ದು, ಈ ಮೂಲಕ Spam ಕರೆಗಳನ್ನು ಗಣನೀಯ ಸಂಖ್ಯೆಯಲ್ಲಿ ಇಳಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಅಂದಾಜು 487 ದಶಲಕ್ಷ ವಾಟ್ಸಾಪ್ ಬಳಕೆದಾರರು ಇದ್ದು, ಹೀಗಾಗಿ ಇನ್ನು ಮುಂದೆ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಸಂಸ್ಥೆ ಕೈಗೊಳ್ಳಲಿದೆ.

ಭಾರತೀಯ ಬಳಕೆದಾರರಿಗೆ ಅಂತರರಾಷ್ಟ್ರೀಯ ವಂಚಕರಿಂದ ಸ್ಪಾಮ್ ಕರೆಗಳು ಅಥವಾ ಸಂದೇಶ ಬಂದಾಗ ಕುತೂಹಲಕ್ಕಾಗಿಯಾದರೂ ಅದಕ್ಕೆ ಸ್ಪಂದಿಸುವ ಕಾರಣ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇಂತಹ ಕರೆ ಹಾಗೂ ಸಂದೇಶಗಳನ್ನು ನಿರ್ಲಕ್ಷಿಸುವುದು ಸೂಕ್ತ. ಇದೀಗ ವಾಟ್ಸಾಪ್ ಸಂಸ್ಥೆ ಅಂತರಾಷ್ಟ್ರೀಯ Spam ಕರೆಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿರುವ ಕಾರಣ ಬಳಕೆದಾರರಿಗೆ ಮತ್ತಷ್ಟು ಸುರಕ್ಷತೆ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read