BIG NEWS: ಕಾಂಗ್ರೆಸ್ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ.ಕೆ

ಬೆಂಗಳೂರು: ನಾನು ನಂಬಿದವರು ನನಗೆ ಮೋಸ ಮಾಡಿದರು, ಬೆನ್ನಿಗೆ ಚೂರಿ ಹಾಕಿದರು. ಆದ್ದರಿಂದ ನಾನು ನಿಮಗೆ ಹಣ ಸಹಾಯ ಮಾಡಲು ಆಗಲಿಲ್ಲ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನಮಗೆ ಕುಟುಂಬ ರಾಜಕಾರಣ ಅಂತ ಟೀಕೆ ಮಾಡ್ತಾರೆ. ಅದಕ್ಕೆ ನೀವು ಮುಂದೆ ಬಂದು ಪಕ್ಷ ಸಂಘಟನೆ ಮಾಡಿ. ನಿಮ್ಮ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸಿದ್ದರಾಮಯ್ಯ 17 ವರ್ಷದ ಮೊಮ್ಮಗನನ್ನು ರಾಜಕೀಯಕ್ಕೆ ತರುತ್ತೇನೆ ಅನ್ನುತ್ತಾರೆ. ಅದು ಕುಟುಂಬ ರಾಜಕಾರಣವಲ್ವಾ? ಅದರ ಬಗ್ಗೆ ಯಾರೂ ಟೀಕೆ ಮಾಡಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ, ಈ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ. ನಾನು ಭವಿಷ್ಯ ಹೇಳ್ತಿಲ್ಲ, ರಾಜಕೀಯ ಸ್ಥಿತಿಗತಿ ನೋಡಿ ಹೇಳುತ್ತಿದ್ದೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read