ನವದೆಹಲಿ: ಬಳ್ಳಾರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭರತ್ ರೆಡ್ಡಿ ವಿರುದ್ಧ ಮಹಿಳೆಯರಿಬ್ಬರು ಜೀವ ಬೆದರಿಕೆ ಹಾಕಿದ ಆರೋಪ ಮಾಡಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಪೂರ್ಣಾಮಾ ರೆಡ್ಡಿ ಹಾಗೂ ಅರುಣಾರೆಡ್ಡಿ ಎಂಬ ಮಹಿಳೆಯರು ಭರತ್ ರೆಡ್ಡಿಗೆ ಕಾಂಗ್ರೆಸ್ ಟಿಕೆಟ್ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ಆಸ್ತಿ ವಿವಾದ ವಿಚಾರವಾಗಿ ಭರತ್ ರೆಡ್ಡಿ ವಿರುದ್ಧ ಕೇಸ್ ದಾಖಲಾಗಿದೆ. ಕೇಸ್ ವಾಪಸ್ ಪಡೆಯುವಂತೆ ಭರತ್ ರೆಡ್ಡಿ ಹಾಗೂ ಬೆಂಬಲಿಗರು ನಮಗೆ ಹೆದರಿಸುತ್ತಿದ್ದಾರೆ. ಭರತ್ ರೆಡ್ಡಿ ಎಂ ಎಲ್ ಎ ಆದ ಬಳಿಕ ನಿಮ್ಮನ್ನು ನೋಡಿಕೊಳ್ತೇವೆ. ಅದು ಹೇಗೆ ಜೀವಿಸುತ್ತೀರಿ ಎಂದು ನೋಡ್ತೀವಿ ಎಂದು ಈಗಲೇ ಬೆದರಿಕೆ ಹಾಕುತ್ತಿದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್ ಸಿಕ್ಕು ಶಾಸಕರಾಗಿ ಆಯ್ಕೆಯಾದರೆ ನಮ್ಮನ್ನು ಮುಗಿಸಿಯೇ ಬಿಡುತ್ತಾರೆ. ಪ್ರತಿದಿನ ಜೀವ ಭಯದಲ್ಲಿ ಬದುಕುತ್ತಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಭರತ್ ರೆಡ್ಡಿ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ. ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಡಿ ಎಂದು ಒತ್ತಾಯಿಸಿದ್ದಾರೆ.
ಮಹಿಳೆಯರಿಬ್ಬರ ಆರೋಪ ಭರತ್ ರೆಡ್ಡಿಗೆ ಮುಳುವಾಗುವ ಸಾಧ್ಯತೆ ಇದ್ದು, ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.