ಮಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಕತ್ತೆ ಕಥೆಯನ್ನು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ.
ಒಂದು ದಿನ ಸೋನಿಯಾ ಗಾಂಧಿಯವರ ಮನೆಯ ಮುಂದೆ ಕತ್ತೆಯೊಂದು ಮಲಗಿತ್ತು…ಖರ್ಗೆ, ಆಜಾದ್, ಹೀಗೆ ಯಾವ ನಾಯಕರಿಂದಲೂ ಆ ಕತ್ತೆಯನ್ನು ಓಡಿಸಲು ಸಾಧ್ಯವಾಗಲಿಲ್ಲ. ಆಗ ವಿಪಕ್ಷ ನಾಯಕ ಸಿದ್ದರಾಮಯ್ಯ ಕತ್ತೆಯನ್ನು ಕಾಂಗ್ರೆಸ್ ಗೆ ಸೇರ್ತಿಯಾ? ಎಂದು ಕೇಳಿದರು. ಕಾಂಗ್ರೆಸ್ ಗೆ ಸೇರ್ತಿಯಾ ಅಂದಿದ್ದಕ್ಕೆ ಕತ್ತೆಯೇ ಓಡಿ ಹೋಯ್ತು ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್, ಭ್ರಷ್ಟಾಚಾರದಲ್ಲಿಯೇ ಮುಳುಗಿದವರು ಡಿ.ಕೆ.ಶಿವಕುಮಾರ್, ಡಿಕೆಶಿ ಅವರದ್ದು ಯಾವ ಸಂತಾನ… ಕಳ್ಳರ ಸಂತಾನ. ಅವರು ತಿಹಾರ್ ಜೈಲಿಗೆ ಹೋಗಿದ್ದು ಯಾಕೆ? ಡಿ.ಕೆ.ಶಿವಕುಮಾರ್ ಅವರದ್ದು ಕಳ್ಳರ ಸಂತಾನ ಎಂದು ಜರಿದಿದ್ದಾರೆ.