ನವದೆಹಲಿ: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ ಮಾಡಲಾದ ಘಟನೆ ನಡೆದಿದೆ.
ದೆಹಲಿಯಿಂದ 350 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಅಮೆರಿಕಾಗೆ ಹೊರಟಿತ್ತು. ಆದರೆ ತಾಂತ್ರಿಕ ದೋಷದ ಕಾರಣಕ್ಕೆ ಏರ್ ಇಂಡಿಯಾ ವಿಮಾನವನ್ನು ಸ್ವೀಡನ್ ನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ.
ದೆಹಲಿಯಿಂದ ಅಮೆರಿಕಾದ ನಾರ್ವೆಗೆ ಹೊರಟಿದ್ದ ವಿಮಾನ ಇದಾಗಿದ್ದು, ಸಧ್ಯ ಸ್ವೀಡನ್ ನಲ್ಲಿ ಲ್ಯಾಂಡ್ ಮಾಡಲಾಗಿದೆ. ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ವಿಮಾನದ ಎಂಜಿನ್ ನಲ್ಲಿ ತೈಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.