ಚಿಕ್ಕಬಳ್ಳಾಪುರ: ಬಾರ್ ಗಳಲ್ಲಿ ಎಣ್ಣೆ ರೇಟ್ ಜಾಸ್ತಿಮಾಡ್ತಾರೆ ಬರೆದಿಟ್ಟುಕೊಳ್ಳಿ ಎಂದು ಮಾಜಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾತನಾಡಿದ ಆರ್. ಅಶೋಕ್, ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರಲ್ಲ, ರೇಟ್ ಕೇಳಿದ್ರೇ ಕಿಕ್ ಬರುತ್ತೆ. ಮದ್ಯದ ದರ ಹೆಚ್ಚಳ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹೊಸದಾಗಿ ಕರೆಂಟ್ ಕನೆಕ್ಷನ್ ತೆಗೆದುಕೊಂಡು ಶೇ.70 ರಷ್ಟು ದರ ಹೆಚ್ಚಿಸಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಸಹ ಜಾಸ್ತಿ ಮಾಡ್ತಾರೆ. 2000 ಕೊಟ್ಟು 4000 ರೂಪಾಯಿ ವಸೂಲಿ ಮಾಡ್ತಿದ್ದಾರೆ ಎಂದು ಜನ ಹೇಳ್ತಿದ್ದಾರೆ. ಅಂದರ್ ಬಾಹರ್ ಆಟದ ರೀತಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.