ರಾಮನಗರ: ಸೂಕ್ತ ಅಭ್ಯರ್ಥಿ ಸಿಕ್ಕರೆ ನಾನು ಚನ್ನಪಟ್ಟಣ ಕ್ಷೇತ್ರದಿಂದ ನಿಲ್ಲುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದ ಬಮೂಲ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ. ಸೂಕ್ತ ಅಭ್ಯರ್ಥಿ ಸಿಕ್ಕರೆ ನಾನು ಚುನಾವಣೆಯಲ್ಲಿ ನಿಲ್ಲುತ್ತಿರಲಿಲ್ಲ. ಇದೇ ನನ್ನ ಕೊನೇ ಚುನಾವಣೆ ಎಂದು ಹೇಳಿದರು.
ಪ್ರತಿನಿತ್ಯ 16ರಿಂದ 18 ಗಂಟೆಗಳ ಕಾಲ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಸಹಕಾರ ಸಂಘದಲ್ಲಿ ಲೂಟಿ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಗೊತ್ತು. ನಮಗೆ ಬಿಜೆಪಿ ಎಂಎಲ್ ಸಿ ಯೋಗೇಶ್ವರ್ ಸರ್ಟಿಫಿಕೆಟ್ ಬೇಡ. ಯಡಿಯೂರಪ್ಪ ನಮಗೆ ವಿಧಾನಸೌಧದಲ್ಲಿಯೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಾನುವಾರುಗಳ ಮೇವಿಗೆ 50 ಪರ್ಸೆಂಟ್ ಸಬ್ಸಿಡಿ ಕೊಡುತ್ತೇವೆ. ಹಸುಗಳ ಫುಡ್ ಗೆ ಸಬ್ಸಿಡಿ ನೀಡುತ್ತೇವೆ. ರೈತರಿಗೆ ಬಿತ್ತನೆಗೆ ಎಕರೆಗೆ 10 ಸಾವಿರ 10 ಎಕರೆಗೆ 1 ಲಕ್ಷ ಹಣ ನೀಡುವುದಾಗಿ ತಿಳಿಸಿದರು.