BIG NEWS: ಅತಂತ್ರ ಪರಿಸ್ಥಿತಿ ಬರಲಿ; ನಾನೇ ಸಿಎಂ ಆಗ್ಬಹುದು ಅಂತ ಒಬ್ಬರು ಕಾಯ್ತಾ ಇದ್ದಾರೆ; ಮಾಜಿ ಸಿಎಂ HDK ವಿರುದ್ಧ ಸಂಸದೆ ಸುಮಲತಾ ಪರೋಕ್ಷ ವಾಗ್ದಾಳಿ

ಮಂಡ್ಯ: ಕಳೆದ ಬಾರಿ ಮಂಡ್ಯದಲ್ಲಿ ಆಯ್ಕೆ ಮಾಡಿದ್ದ 7 ಶಾಸಕರು ಯಾವ ಸಾಧನೆ ಮಾಡಿದ್ದಾರೆ? ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಾದ ಕಾಲ ಬಂದಿದೆ ಎಂದು ಸಂಸದೆ ಸುಮಲತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಸುಮಲತಾ, ಕಳೆದ ಚುನಾವಣೆಯಲ್ಲಿ 7ಕ್ಕೆ 7 ಶಾಸಕರನ್ನು ಆಯ್ಕೆ ಮಾಡಿದ್ರಿ. ಅವರೆಲ್ಲ ಯಾವ ಅಭಿವೃದ್ಧಿ ಕೆಲಸವನ್ನು ಮಾಡಿದರು? ಮಂಡ್ಯದಲ್ಲಿ ಈ ಬಾರಿ ಬದಲಾವಣೆಯನ್ನು ತರಬೇಕಿದೆ ಎಂದು ಹೇಳಿದರು.

ಯಾರೋ ಒಬ್ಬರು ಕನಸು ಕಾಣುತ್ತಿದ್ದಾರೆ. ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಬರಲಿ, ಆಗ ನಾನೇ ಸಿಎಂ ಆಗಬಹುದು ಎಂದು ಕಾಯ್ತಾ ಇದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read