ಬೆಂಗಳೂರು: ಬೆಂಗಳೂರಿನ ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದ್ದು, ಈವರೆಗೆ 1.9 ಕೋಟಿ ಮೌಲ್ಯದ ವಸ್ತುಗಳು, 98 ಎಕರೆ ಭೂಮಿ ಪತ್ರಗಳು ಲಭ್ಯವಾಗಿವೆ.
ನಿನ್ನೆ ರಾತ್ರಿಯೂ ಲೋಕಾಯುಕ್ತ ಅಧಿಕಾರಿಗಳು ಅಜಿತ್ ರೈ ಮನೆಯಲ್ಲೇ ಇದ್ದು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈವರೆಗೆ 1.9 ಕೋಟಿ ಮೌಲ್ಯದ ವಸ್ತುಗಳು, 40 ಲಕ್ಷ ನಗದು, 700 ಗ್ರಾಮ್ ಚಿನ್ನ ಪತ್ತೆಯಾಗಿದೆ. ದೊಡ್ಡಬಳ್ಳಾಪುರದ ಬಳಿಯ 98 ಎಕರೆ ಭೂಮಿಯ ಕಾಗದ ಪತ್ರ ಕೂಡ ಲಭ್ಯವಾಗಿದ್ದು, 98 ಎಕರೆ ಭೂಮಿ ಮೌಲ್ಯ 300 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.
ಅಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಲ್ಲೂರು ಬಳಿಯ 30 ಎಕರೆ ಜಮೀನು ಪತ್ರ ಲಭ್ಯವಾಗಿದೆ. ಅಜಿತ್ ರೈ ಹಾರ್ಸ್ ರೈಡಿಂಗ್ ಸ್ಕೂಲ್ ತೆರೆಯಲು ಸಿದ್ಧತೆ ನಡೆಸಿದ್ದರು. ಲ್ಯಾಂಡ್ ಕ್ರೂಜರ್, ಇನ್ನೋವಾ, ಫಾರ್ಚುನರ್ ಕಾರುಗಳು, ಡುಕಾಟಿ ಸೇರಿ ಕೆಲ ಬೈಕ್ ಗಳು ದಾಳಿ ವೇಳೆ ಪತ್ತೆಯಾಗಿದ್ದು, ವರ್ಷಕ್ಕೆ 1 ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಜಿತ್ ರೈ ನಿವಾಸದಲ್ಲಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಇನ್ನೂ ಮುಂದುವರೆದಿದೆ.