ಬೆಂಗಳೂರು: ಕೆ.ಆರ್. ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ ಟೆಕ್ಕಿ ಯುವತಿ ಸಾವನ್ನಪ್ಪಿರುವ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಐ ಐ ಎಸ್ ಸಿ ತಜ್ಞರ ಮೊರೆ ಹೋಗಿದೆ. ಪ್ರಮುಖವಾಗಿ ಅಂಡರ್ ಪಾಸ್ ಗಳ ಕಾರ್ಯಕ್ಷಮತೆ ಬಗ್ಗೆ ಅಧ್ಯಯನ ಮಾಡುವಂತೆ ತಿಳಿಸಿದೆ.
ತಗ್ಗುಪ್ರದೇಶ, ರಸ್ತೆಗುಂಡಿ ಮ್ಯಾಪಿಂಗ್ ಮಾಡುವಂತೆ ಅಧಿಕಾರಿಗಳಿಗೆ ಟ್ರಾಫಿಕ್ ಕಮಿಷನರ್ ಸಲೀ< ಸೂಚನೆ ನೀಡಿದ್ದಾರೆ. ಇದೇ ವೇಳೆ ಬಿಬಿಎಂಪಿ ದೆಹಲಿ ಮಾದರಿ ಅಂಡರ್ ಪಾಸ್ ನಿರ್ಮಾಣಕ್ಕೆ ಪಾಲಿಕೆ ಸಜ್ಜಾಗಿದೆ.
ಎಲ್ಲಾ ಅಂಡರ್ ಪಾಸ್ ಗಳಿಗೆ ಹೈಟೆಕ್ ಟಚ್ ನೀಡಲು ಪ್ಲಾನ್ ಮಾಡಲಾಗಿದೆ. ಜೋರು ಮಳೆ ಬಂದರೂ ನೀರು ನಿಲ್ಲದಂತೆ ಕ್ರಮಕೈಗೊಳ್ಳಲು ಚಿಂತನೆ ನಡೆಸಲಾಗಿದೆ.