ವ್ಯಕ್ತಿಯೊಬ್ಬ ರೈಲು ಕಂಟೈನರ್ ಮೇಲೆ ಹತ್ತಿ ಹೈಟೆನ್ಷನ್ ವೈರ್ ಗಳನ್ನು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಭೋಪಾಲ್ ರೈಲ್ವೇ ಜಂಕ್ಷನ್‌ನಲ್ಲಿ ವರದಿಯಾಗಿದೆ.
ವೈರ್ ಹಿಡಿದುಕೊಳ್ತಿದ್ದಂತೆ ಶಾಕ್ ನಿಂದ ಆತನ ದೇಹದಿಂದ ಹೊಗೆ ಹೊರಬಂದಿದ್ದು ಪ್ರಜ್ಞಾಹೀನನಾಗಿ ಬಿದ್ದಿದ್ದ. ಈ ದೃಶ್ಯ ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಮೊಬೈಲ್ ಗಳಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈ ಟೆನ್ಶನ್ ತಂತಿಗಳನ್ನು ಸ್ಪರ್ಶಿಸಿದ ನಂತರ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಭೋಪಾಲ್‌ನ ಹಮಿದಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸರ್ಕಾರಿ ರೈಲ್ವೆ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸರು ಕಟ್ಟುನಿಟ್ಟಿನ ಜಾಗರೂಕತೆಯ ನಂತರವೂ ಆ ವ್ಯಕ್ತಿ ರೈಲಿನ ಮೇಲ್ಛಾವಣಿಯನ್ನು ಹತ್ತಿದ್ದು ಪ್ರಶ್ನೆ ಹುಟ್ಟುಹಾಕಿದೆ. ಸದ್ಯ ಈ ಘಟನೆಯು ಕಳವಳವನ್ನು ಉಂಟುಮಾಡಿದ್ದು ರೈಲ್ವೆ ನಿಲ್ದಾಣದಲ್ಲಿ ಭಾರಿ ಭದ್ರತಾ ಲೋಪವನ್ನು ಸೂಚಿಸುತ್ತದೆ.
https://twitter.com/FreePressMP/status/1785959392564650116?ref_src=twsrc%5Etfw%7Ctwcamp%5Etweetembed%7Ctwterm%5E1785959392564650116%7Ctwgr%5E283ba179e121e9e9755893ebfb86f19f4be08437%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fbhopalshockermanclimbsatopcontainertrainholdshightensionwirestokillselfvideoshowshisfumingbody-newsid-n605420582