ಬೆಂಗಳೂರು: ಕಲಬುರಗಿಯ ಪಟಕಾ ತೊಗರಿ ಬೇಳೆ ಮಾರಾಟಕ್ಕೆ ಇ- ಕಾಮರ್ಸ್ ಬಲ ನೀಡಲಾಗಿದೆ. ರೈತರಿಗೆ ಪ್ರತಿ ಕ್ವಿಂಟಲ್ ಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚುವರಿಯಾಗಿ 300 ರೂಪಾಯಿ ನೀಡಲಾಗುವುದು.
ಇ-ಕಾಮರ್ಸ್ ಮೂಲಕ ಉತ್ಕೃಷ್ಟ ಗುಣದಿಂದ ಜಾಗತಿಕವಾಗಿ ಹೆಸರಾಗಿರುವ ಮತ್ತು ಜಿಐ ಮಾನ್ಯತೆ ಪಡೆದಿರುವ ಕಲಬುರಗಿಯ ರುಚಿಕರ ‘ಭೀಮಾ ಬ್ರ್ಯಾಂಡ್’ ತೊಗರಿ ಬೇಳೆಗೆ ದೇಶಾದ್ಯಂತ ಮಾರಕಟ್ಟೆ ಸಿಕ್ಕಂತಾಗಿದೆ. ಇದು ಬೆಳೆಗಾರರಿಗೆ ಶುಭ ಸುದ್ದಿಯಾಗಿದೆ. ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ಮಾರುಕಟ್ಟೆ ದರಕ್ಕಿಂತ 300 ರೂ. ಸಿಗಲಿದೆ. ನಂದಿನಿ ಹಾಲಿನಂತೆ ಸರ್ಕಾರಿ ಸಂಸ್ಥೆಯಿಂದಲೇ ಗ್ರಾಹಕರಿಗೆ ಜಿಐ ಬೇಳೆ ತಲುಪಿಸುವ ಯೋಜನೆ ಇದಾಗಿದೆ.