ದುನಿಯಾ ವಿಜಯ್ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ‘ಭೀಮ’ ಚಿತ್ರ ಆಗಸ್ಟ್ 9ರಂದು ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದುನಿಯಾ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ.
ಕೃಷ್ಣ ಕ್ರಿಯೇಶನ್ಸ್ ಹಾಗೂ ಜಗದೀಶ್ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಅಶ್ವಿನಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಕಲ್ಯಾಣಿ ರಾಜು, ಗಿರಿಜಾ, ಬ್ಲಾಕ್ ಡ್ರ್ಯಾಗನ್ ಮಂಜು, ರಂಗಾಯಣ ರಘು, ಉಳಿದ ತಾರಾ ಬಳಗದಲ್ಲಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ, ಶಿವಸೇನಾ ಛಾಯಾಗ್ರಹಣವಿದೆ.