ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಮೇಕಪ್ ನಲ್ಲಿ ಅತಿ ಮುಖ್ಯ ಎನಿಸಿಕೊಳ್ಳುವ ಈ ಕನ್ಸೀಲರ್ ಖರೀದಿಗೂ ಮೊದಲು ನೀವು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
ಕನ್ಸೀಲರ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಉತ್ತಮ ಗುಣಮಟ್ಟದ ಕನ್ಸೀಲರ್ ಖರೀದಿ ಒಳ್ಳೆಯದು. ಬೆಲೆ ಕಡಿಮೆ ಎಂಬ ಮಾತ್ರಕ್ಕೆ ಕಡಿಮೆ ಬೆಲೆಯ ಕನ್ಸೀಲರ್ ಖರೀದಿ ಮಾಡಿದ್ರೆ ನಿಮ್ಮ ಸೌಂದರ್ಯ ಹಾಳಾಗೋದ್ರಲ್ಲಿ ಸಂಶಯವಿಲ್ಲ.
ಕನ್ಸೀಲರ್ ಬೇರೆ ಬೇರೆ ಬಣ್ಣದಲ್ಲಿ ಕೂಡ ಸಿಗುತ್ತದೆ. ನಿಮ್ಮ ಚರ್ಮದ ಟೋನ್ ಪ್ರಕಾರ ನೀವು ಯಾವ ಬಣ್ಣ ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಕನ್ಸೀಲರ್ ನಿಮ್ಮ ಚರ್ಮದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಹಾಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅವುಗಳು ಯಾವ್ಯಾವುವು ಎಂಬುದರ ವಿವರ ಇಲ್ಲಿದೆ.
ನರ್ಸ್ ರೇಡಿಯಂಟ್ ಕ್ರೀಂ ಕನ್ಸೀಲರ್ (Nars Radiant Creamy Concealer)
ಅಮೇಜಿಂಗ್ ಕಾಸ್ಮೆಟಿಕ್ ಅಮೇಜಿಂಗ್ ಕನ್ಸೀಲರ್
ಅಲ್ಟ್ರಾ ಹೆಚ್ ಡಿ ಕನ್ಸೀಲರ್
ಈ ಬ್ರ್ಯಾಂಡ್ ನ ಕನ್ಸೀಲರ್ ಬಳಸಿ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ. ಜೊತೆಗೆ ಚರ್ಮಕ್ಕೆ ಹಾನಿಯಾಗುತ್ತೆ ಎಂಬ ಚಿಂತೆ ಬಿಟ್ಟುಬಿಡಿ.