ಬೆಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ರೈತರನ್ನು ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಪೀಣ್ಯ ಠಾಣೆ ಪೊಲೀಸರು ಬೆಸ್ಕಾಂ ಅಧಿಕಾರಿಯನ್ನು ಬಂಧಿಸಿದ್ದಾರೆ.
ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್ ಗಂಗಾಧರನನ್ನು ಬಂಧಿಸಲಾಗಿದೆ. ಕೆಐಎಡಿಬಿಯಿಂದ ರೈತರಿಗೆ ಹಣ ಕೊಡಿಸುವ ನೆಪದಲ್ಲಿ ಈತ ಕಮಿಷನ್ ನೆಪದಲ್ಲಿ ಲಕ್ಷಾಂತರ ರೂ.ಹಣ ಪಡೆದು ವಂಚಿಸಿದ್ದಾರೆ. ತನ್ನ ಕಾರ್ ಗೆ ಪೊಲೀಸ್ ಜಾಗೃತ ದಳದ ಬೋರ್ಡ್ ಅಳವಡಿಸಿಕೊಂಡಿದ್ದಲ್ಲದೇ, ಪ್ರವಾಸಿ ಸ್ಥಳ, ಇತರೆಡೆ ವಿಐಪಿ ಎಂದು ಹೇಳಿಕೊಳ್ಳುತ್ತಿದ್ದರು. ಐಡಿ ಕಾರ್ಡ್ ಕೇಳಿದರೆ ಪೊಲೀಸ್ ಇನ್ಸ್ಪೆಕ್ಟರ್ ಐಡಿ ತೋರಿಸುತ್ತಿದ್ದರು ಎನ್ನಲಾಗಿದೆ.
ಹಲವು ವರ್ಷಗಳಿಂದ ಇದೇ ರೀತಿ ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಹಲವು ವರ್ಷಗಳಿಂದ ಕಳ್ಳಾಟ ಆಡುತ್ತಿದ್ದ ಗಂಗಾಧರನನ್ನು ಕೊನೆಗೂ ಬಂಧಿಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ಗಂಗಾಧರ್ ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.