ಮನೆ ಬಾಗಿಲು ತೆರೆದಿಟ್ಟು ಕೆಲಸ ಮಾಡುವವರೇ ಎಚ್ಚರ! ಹಾಡಹಗಲೇ ಸದ್ದಿಲ್ಲದೇ ಮನೆಗೆ ಬಂದು ಚಿನ್ನಾಭರಣ ಕದ್ದೊಯ್ದ ಖದೀಮ

ಬೆಂಗಳೂರು: ಮನೆ ಬಾಗಿಲು ತೆರೆದಿಟ್ಟು ಕೆಲಸ ಮಾಡುವವ ಬೆಂಗಳೂರಿಗರೇ ಹುಷಾರ್! ಹಾಡಹಗಲೇ ನಿಮಗೆ ಗೊತ್ತೇ ಆಗದಂತೆ ಮನೆಗೆ ಬರುವ ಕಳ್ಳರು ಸದ್ದಿಲ್ಲದೇ ಚಿನ್ನಾಭರಣ, ಹಣ ದೋಚಿ ಪರಾರಿಯಾಗ್ತಾರೆ. ಇಂತದ್ದೊಂದು ಘಟನೆ ಬಸವನಗುಡಿಯಲ್ಲಿ ನಡೆದಿದೆ.

ಬಸವನಗುಡಿಯ ಉತ್ತರಾಧಿಮಠದ ರಸ್ತೆಯಲ್ಲಿದ್ದ ಮನೆಯಲ್ಲಿ ಕಳ್ಳನೊಬ್ಬ ಮೆಲ್ಲಗೆ ನುಗ್ಗಿ ವೃದ್ಧೆಯ ಪಕ್ಕದಲ್ಲಿದ್ದ ಚಿನ್ನಾಭರಣವನ್ನೇ ಕದ್ದು ಪರಾರಿಯಾಗಿದ್ದಾನೆ. ಸೆ.28ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡು ಮನೆಯವರು ಸಿಸಿಟಿವಿ ಪರಿಶೀಲಿಸಿದಾಗ ಹಾಡಹಗಲೇ ಕಳ್ಳನೊಬ್ಬ ಮನೆಗೆ ಬಂದು ಕಳ್ಳತನಮಾಡಿರುವುದು ಗೊತ್ತಾಗಿದೆ.

ಅಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಮೀರ್ ಕಟ್ಟಿ ಎಂಬುವವರ ಮನೆ ಬಾಗಿಲು ತೆರೆದಿತ್ತು. ಸಮೀರ್ ಕಟ್ಟಿಯವರ ತಂದೆ ಮನೆಯ ಮೊದಲ ಮಹಡಿಯಲ್ಲಿ ಗಾಢ ನಿದ್ರೆಯಲ್ಲಿದ್ದರು. ಸಮೀರ್ ಕಟ್ಟಿಯವರ ತಾಯಿ ಮನೆಯ ಒಳಗೆ ಕೆಲಸ ಮಾಡುತ್ತಿದ್ದರು. ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿ ನಿಧಾನವಾಗಿ ಒಳಬಂದ ಕಳ್ಳ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಫ್ರಿದಿ ಎಂಬಾತನನ್ನು ಬಂಧಿಸಿದ್ದರು. ಜೈಲು ಸೇರಿದ್ದ ಆರೋಪಿ ಅಫ್ರಿದಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read