
ವಾಹನದಲ್ಲಿ ಡ್ಯಾಶ್ಕ್ಯಾಮ್ ಇದ್ದ ಕಾರಣ ಚಾಲಕ ಸುಳ್ಳು ಆರೋಪಗಳಿಂದ ಪಾರಾಗಿದ್ದಾರೆ. safecars_india ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಈ ಘಟನೆ ಆನ್ಲೈನ್ನಲ್ಲಿ ತೀವ್ರ ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ. ನೆಟಿಜನ್ಗಳು ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಂತಹ ಕೃತ್ಯಗಳು ಹಣ ಸುಲಿಗೆ ಮತ್ತು ಚಾಲಕರನ್ನು ಕಿರುಕುಳ ನೀಡುವ ಮಾರ್ಗವಾಗಿ ಹೇಗೆ ಮಾರ್ಪಟ್ಟಿವೆ ಎಂಬುದನ್ನು ಹಲವು ಬಳಕೆದಾರರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಡ್ಯಾಶ್ಕ್ಯಾಮ್ನ ಬಳಕೆಯನ್ನು ಇತರರು ಹೈಲೈಟ್ ಮಾಡಿದ್ದಾರೆ.
“ಕ್ರ್ಯಾಶ್ ಫಾರ್ ಕ್ಯಾಶ್”: ಇಂತಹ ನಕಲಿ ಅಪಘಾತ ಪ್ರಕರಣಗಳನ್ನು “ಕ್ರ್ಯಾಶ್ ಫಾರ್ ಕ್ಯಾಶ್” ಎಂದು ಕರೆಯಲಾಗುತ್ತದೆ. ವಂಚಕರು ನಕಲಿ ಅಪಘಾತಗಳನ್ನು ಸೃಷ್ಟಿಸಿ ಸುಳ್ಳು ವಿಮಾ ಕ್ಲೈಮ್ ಸಲ್ಲಿಸಲು ಅಥವಾ ಚಾಲಕರಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಾರೆ.
View this post on Instagram


