ಸತತ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ತಂದಿದ್ದ ಬೆಂಗಳೂರು ಬುಲ್ಸ್ ಮೊನ್ನೆಯಷ್ಟೇ ಯುಪಿ ಯೋಧಾಸ್ ಜೊತೆ ರೋಚಕ ಜಯ ಸಾಧಿಸುವ ಮೂಲಕ. ಕಮ್ ಬ್ಯಾಕ್ ಮಾಡಿದೆ ಇಂದು ಬೆಂಗಳೂರು ಬುಲ್ಸ್ ಬಲಿಷ್ಠ ತಂಡವಾದ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದರಿಸಬೇಕಾಗಿದೆ.
ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದಲ್ಲಿ ಅರ್ಜುನ್ ದೇಶವಾಲ್ ಪ್ರಮುಖ ಅಸ್ತ್ರವಾಗಿದ್ದು, ಬೆಂಗಳೂರು ಬುಲ್ಸ್ ತಂಡದಲ್ಲಿ ಭರತ್ ಸೇರಿದಂತೆ ವಿಕಾಸ್ ಖಂಡೋಲಾ ಕೂಡ ರೈಡಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಬೆಂಗಳೂರು ಬುಲ್ಸ್ ಇಂದು ತನ್ನ ಓಂ ಗ್ರೌಂಡ್ ನಲ್ಲಿ ಮತ್ತೊಂದು ಜಯ ಸಾಧಿಸುವ ನಿರೀಕ್ಷೆಯಲ್ಲಿದೆ.