
ಪ್ರೊ ಕಬಡ್ಡಿ ಲೀಗ್ ಬಂದು ಈಗಾಗಲೇ ಹತ್ತು ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೂ ಬೆಳವಣಿಗೆ ಕಾಣುತ್ತಲೇ ಇದೆ. ಸಾಕಷ್ಟು ಮನೋರಂಜನೆ ನೀಡುವ ಪ್ರೊ ಕಬಡ್ಡಿಯ ವೀಕ್ಷಕರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಇಂದು ಪ್ರೊ ಕಬಡ್ಡಿಯ 73ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯ ಪ್ರೊ ಕಬಡ್ಡಿ ಇತಿಹಾಸದ ಒಂದು ಸಾವಿರದ ಪಂದ್ಯವಾಗಿದೆ. ಜೈಪುರ್ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಎರಡೂ ತಂಡಗಳು ಸಜ್ಜಾಗಿವೆ.
ಇಂದು ಪ್ರೊ ಕಬ್ಬಡಿಯ ಮತ್ತೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಯು ಮುಂಬಾ ಸೆಣಸಾಡಲಿವೆ. ಇಂದು ಸಂಕ್ರಾಂತಿ ಹಬ್ಬಕ್ಕೆ ಕಬಡ್ಡಿಯ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ಸಿಗಲಿದೆ.
