Watch Video | ಬಿಸಿಲಿನ ಬೇಗೆಗೆ ಮನೆ ಮಹಡಿಯಲ್ಲಿ ತವ ಇಟ್ಟು ಆಮ್ಲೆಟ್

ಬೇಸಿಗೆಯ ಬೇಗೆಗೆ ದೇಶದ ಬಹುತೇಕ ಪ್ರದೇಶಗಳು ಅಕ್ಷರಶಃ ಬೇಯುತ್ತಿವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಬಿರು ಬಿಸಿಲಿನ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಊರೊಂದರಲ್ಲಿ 46 ಡಿಗ್ರಿ ಗರಿಷ್ಠ ತಾಪಮಾನವಿದ್ದ ಹಿನ್ನೆಲೆಯಲ್ಲಿ ನೆಟ್ಟಿಗರೊಬ್ಬರು ತಮ್ಮ ಮನೆಯ ಮಹಡಿಯ ಮೇಲೆ ತವ ಇಟ್ಟು, ಬಿಸಿಲಿನ ತಾಪದಲ್ಲೇ ಆಮ್ಲೆಟ್ ಮಾಡಿದ್ದಾರೆ.

ವಿಡಿಯೋಗೆ 1.5 ದಶಲಕ್ಷ ವೀಕ್ಷಣೆಗಳು ಸಂದಾಯವಾಗಿವೆ. ’ಅಬ್ಬಬ್ಬಾ ಎಂಥ ಬಿಸಿಲು!’ ಎಂದು ಕೆಲ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದರೆ, ಅಷ್ಟು ಹೊತ್ತು ಬಿಸಿಲಿನಲ್ಲಿ ನಿಲ್ಲದಿರಲು ಕೆಲವರು ಸಲಹೆ ನೀಡಿದ್ದಾರೆ.

https://www.youtube.com/watch?v=TuNOPb08mZQ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read