ಬೆಂಗಳೂರು: ಬಿಎಡ್ ಪ್ರವೇಶಾತಿಗೆ ಜನವರಿ 6ರೊಳಗೆ ಮೂಲ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. 2023 -24ನೇ ಸಾಲಿನ ಬಿಎಡ್ ಕೋರ್ಸ್ ನ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳು ನೋಡಲ್ ಕೇಂದ್ರಗಳಲ್ಲಿ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು.
ಮೊದಲನೇ ಸುತ್ತಿನಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳು ಕೂಡ ಜನವರಿ 6ರೊಳಗೆ ಹಾಜರಾಗಬೇಕು ಎಂದು ಕೇಂದ್ರೀಕೃತ ದಾಖಲಾತಿ ಘಟಕ ಮಾಹಿತಿ ನೀಡಿದೆ. ಹೆಚ್ಚಿನ ವಿವರಗಳಿಗೆ ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ ಅಥವಾ ಡಯಟ್ ನೋಡಲ್ ಕೇಂದ್ರಗಳನ್ನು ಸಂಪರ್ಕಿಸಬಹುದು. ಎರಡನೇ ಸುತ್ತಿನ ಪರಿಶೀಲನಾ ಪಟ್ಟಿಯನ್ನು ಜನವರಿ 1ರಂದು ಪ್ರಕಟಿಸಲಾಗಿದೆ.