alex Certify ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಮುನ್ನ ಕ್ರಿಕೆಟ್ ಸ್ಟೇಡಿಯಂಗಳ ಉನ್ನತೀಕರಣ: ಬಿಸಿಸಿಐ ಮಹತ್ವದ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಮುನ್ನ ಕ್ರಿಕೆಟ್ ಸ್ಟೇಡಿಯಂಗಳ ಉನ್ನತೀಕರಣ: ಬಿಸಿಸಿಐ ಮಹತ್ವದ ತೀರ್ಮಾನ

ಮುಂಬೈ: 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ಸಿದ್ಧತೆ ನಡೆಸಿದೆ. ವಿಶ್ವಕಪ್‌ಗೆ ಮುನ್ನ ಕ್ರಿಕೆಟ್ ಸ್ಟೇಡಿಯಂಗಳ ಉನ್ನತೀಕರಣದ ಯೋಜನೆ ಮಾಡಲಾಗುವುದು ಅಂತಾ ಬಿಸಿಸಿಐ ಹೇಳಿದೆ.

ಈ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬೈನಲ್ಲಿ ಸಭೆ ನಡೆಸಿತು. ಆ ಬಳಿಕ ದೇಶಾದ್ಯಂತ ಕ್ರಿಕೆಟ್ ಸ್ಟೇಡಿಯಂಗಳ ಉನ್ನತೀಕರಣವನ್ನು ಎರಡು ಹಂತಗಳಲ್ಲಿ ಮುಂದುವರಿಸಲಾಗುವುದು ಎಂದು ನಿರ್ಧರಿಸಿರುವುದಾಗಿ ತಿಳಿಸಿದೆ.

ಇನ್ನು ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಏನೇನು ನಿರ್ಧಾರ ತೆಗೆದುಕೊಂಡಿತು ಅನ್ನೋದು ಈ ಕೆಳಗಿನಂತಿದೆ.

– ಬಿಸಿಸಿಐ ತನ್ನ ಆಟಗಾರರಿಗೆ (ನಿವೃತ್ತ ಆಟಗಾರರನ್ನು ಒಳಗೊಂಡಂತೆ) ಸಾಗರೋತ್ತರ ಟಿ-20 ಲೀಗ್‌ಗಳಲ್ಲಿ ಅವರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸುತ್ತದೆ.

– 2023ರ ಸೆಪ್ಟೆಂಬರ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಮಂಡಳಿಯು ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸುತ್ತದೆ. ವಿಶ್ವಕಪ್‌ನಲ್ಲಿ ಭಾಗವಹಿಸದ ಆಟಗಾರರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಆಡವುದಕ್ಕೆ ಆಯ್ಕೆ ಮಾಡಲು ನಿರ್ಧರಿಸಿದೆ.

– ಬಿಸಿಸಿಐ ಮುಂದಿನ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಪರಿಕಲ್ಪನೆಯೊಂದಿಗೆ ಹಿಂದಿನ ಸೀಸನ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ಗಿಂತ ಎರಡು ಬದಲಾವಣೆಗಳೊಂದಿಗೆ ಮುಂದುವರಿಯುತ್ತದೆ.

– ಬಿಸಿಸಿಐ ಎರಡು ಹಂತಗಳಲ್ಲಿ ದೇಶದ ಕ್ರೀಡಾಂಗಣಗಳ ಉನ್ನತೀಕರಣ ಮಾಡಲು ಮುಂದಾಗಿದೆ.

(1) ಮೊದಲ ಹಂತವು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಎಲ್ಲೆಲ್ಲಿ ಪಂದ್ಯ ಇರುವುದೋ ಆ ಕ್ರೀಡಾಂಗಣದ ಕೆಲಸ ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ಪೂರ್ಣಗೊಳ್ಳುತ್ತದೆ.

(2) ಎರಡನೇ ಹಂತವು ಇನ್ನುಳಿದ ಕ್ರೀಡಾಂಗಣಗಳ ಉನ್ನತೀಕರಣವನ್ನು ಒಳಗೊಂಡಿರುತ್ತದೆ.

ಅಂದಹಾಗೆ, ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ರ ಆರಂಭಿಕ ಪಂದ್ಯವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಪ್ರಾರಂಭವಾಗಲಿದೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ 10 ಸ್ಥಳಗಳಲ್ಲಿ ನಡೆಯಲಿರುವ ಈ ಅತಿದೊಡ್ಡ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹತ್ತು ತಂಡಗಳು ಭಾಗವಹಿಸಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ, ಪಂದ್ಯಾವಳಿಯ ಆರಂಭಿಕ ಮತ್ತು ಅಂತಿಮ ಪಂದ್ಯವನ್ನು ಆಯೋಜಿಸುತ್ತದೆ. ಒಟ್ಟು 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ.

ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...