ಮಂಡ್ಯಕ್ಕೆ ಬರಲಿದ್ದಾರೆ ‘ಬರಾಕ್ ಒಬಾಮಾ’ : ಸಕ್ಕರೆ ನಾಡಲ್ಲಿ ಏನು ವಿಶೇಷ..?

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಹೌದು, ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಮಂಡ್ಯಕ್ಕೆ ಅವರು ಭೇಟಿ ನೀಡಲಿದ್ದಾರೆ.

ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಅವರು ನವೆಂಬರ್ ನಲ್ಲಿ ಕರ್ನಾಟಕದ ಮಂಡ್ಯಕ್ಕೆ ಭೇಟಿ ನೀಡಲಿದ್ದು, ಯುಎಸ್ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಅವರ ಕುಟುಂಬ ನಿರ್ಮಿಸಲಿರುವ ಆಧ್ಯಾತ್ಮಿಕ ಕೇಂದ್ರದ ಶಂಕುಸ್ಥಾಪನೆಗೆ ಬರಲಿದ್ದಾರೆ. 12 ಎಕರೆ ಪ್ರದೇಶದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗಲಿದೆ.

ಸ್ಕೋಪ್ ಫೌಂಡೇಶನ್ನಿಂದ ಧನಸಹಾಯ ಪಡೆದ ಈ ಪ್ರಾಜೆಕ್ಟ್ ನಲ್ಲಿ 11 ಅಡಿ ಎತ್ತರದ “ಮದರ್ ಆಫ್ ಅರ್ಥ್” ಪ್ರತಿಮೆಯನ್ನು ಒಂದೇ ಬಂಡೆಯಿಂದ ಕೆತ್ತಲಾಗುತ್ತದೆ. ಮಂಟಪದಲ್ಲಿ ಭೂ ದೇವಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಕೂಡ ಚಿಂತನೆ ನಡೆಸಿದೆ. ಭೂಮಿ ಪ್ರತಿಮೆ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ 64 ಮಂದಿ ವಿಶ್ವಮಾನವರ ಪ್ರತಿಮೆ ಕೂಡ ತಲೆ ಎತ್ತಲಿದೆ.11 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಯೋಗ ಮತ್ತು ಧ್ಯಾನ ಸಾತ್ವಿಕ ಕೇಂದ್ರದ ಶಂಕುಸ್ಥಾಪನೆಗೆ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಆಹ್ವಾನಿಸಲು ಪ್ರತಿಷ್ಠಾನವು ಯೋಜಿಸಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read