alex Certify ಒಂದೇ ಮನೆ ಮೇಲೆ 21 ಬ್ಯಾಂಕ್ ಗಳಿಂದ ಸಾಲ ಪಡೆದ ಭೂಪ: ಮನೆ ಹರಾಜಿಗೆ ಬ್ಯಾಂಕ್ ಗಳ ಪೈಪೋಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಮನೆ ಮೇಲೆ 21 ಬ್ಯಾಂಕ್ ಗಳಿಂದ ಸಾಲ ಪಡೆದ ಭೂಪ: ಮನೆ ಹರಾಜಿಗೆ ಬ್ಯಾಂಕ್ ಗಳ ಪೈಪೋಟಿ

 

ಬೆಂಗಳೂರು: ಒಂದೇ ಮನೆಯ ಮೇಲೆ 21 ಬ್ಯಾಂಕ್ ಗಳಲ್ಲಿ ಭೂಪನೊಬ್ಬ ಸಾಲ ಪಡೆದುಕೊಂಡಿದ್ದಾನೆ. ಬೆಂಗಳೂರಿನ 21 ಬ್ಯಾಂಕುಗಳಲ್ಲಿ ಮನೆ ಮೇಲೆ ಸಾಲ ಮಾಡಿ ಮಾಲೀಕ ನಂಜುಂಡಯ್ಯ ಎಂಬಾತ ಪರಾರಿಯಾಗಿದ್ದಾನೆ.

ಕೋಟ್ಯಂತರ ರೂಪಾಯಿ ಸಾಲ ಪಡೆದ ಬೊಮ್ಮನಹಳ್ಳಿಯ ಬೇಗೂರಿನ ನಂಜುಂಡಪ್ಪ ಲೇಔಟ್ ನ ನಂಜುಂಡಯ್ಯ ಪರಾಯಾಗಿದ್ದಾನೆ. ಸಾಲಗಾರನ ಮನೆ ಹರಾಜು ಹಾಕಲು ಬ್ಯಾಂಕುಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಸಣ್ಣ ಪುಟ್ಟ ಸಾಲಕ್ಕೆ ಹತ್ತಾರು ದಾಖಲೆ ಕೇಳುವ ಬ್ಯಾಂಕ್ ನವರು ನಂಜುಂಡಯ್ಯನವರಿಗೆ ದಾಖಲೆ ಪರಿಶೀಲಿಸದೇ ಬ್ಯಾಂಕ್ ಗಳು ಸಾಲ ನೀಡಿರುವ ಅನುಮಾನ ವ್ಯಕ್ತವಾಗಿದೆ. ಮನೆ ಮುಂದೆ ಬ್ಯಾಂಕ್ ಗಳ ನೋಟಿಸ್ ಗಳು ಕಂಡು ಬಂದಿವೆ. ಈ ಮನೆ ನಮ್ಮ ಬ್ಯಾಂಕ್ ಗೆ ಸೇರಿದೆ ಎನ್ನುವ ಗೋಡೆ ಬರಹ ಕಂಡು ಬಂದಿದ್ದು, ಮನೆ ಗೇಟ್ ಗೆ ಸೀಲ್ ಹಾಕಲಾಗಿದೆ. ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್ ಸೇರಿ 21 ಬ್ಯಾಂಕ್ ಗಳಲ್ಲಿ ಸಾಲ ಪಡೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...