ಎರಡು ರೂಪಾಂತರಗಳಲ್ಲಿ ಬರಲಿದೆ ಬಜಾಜ್‌ನ CNG ಬೈಕ್

 

ಬಜಾಜ್‌ ಕಂಪನಿಯ ಬಹುನಿರೀಕ್ಷಿತ CNG ಮೋಟಾರ್‌ ಸೈಕಲ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಇದನ್ನು ಸದ್ಯ ಬ್ರೂಜರ್ ಎಂದು ಕರೆಯಲಾಗುತ್ತಿದೆ. ಈ ಹೊಸ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಈಗಾಗ್ಲೇ ಪರೀಕ್ಷಾರ್ಥವಾಗಿ ಸವಾರಿ ಮಾಡಲಾಗಿದೆ. ಇವು ಸಾಮಾನ್ಯ ಪ್ರಯಾಣಿಕ ಮೋಟಾರ್‌ಸೈಕಲ್‌ನಂತೆಯೇ ಇವೆ. ಹ್ಯಾಂಡ್ ಗಾರ್ಡ್‌ಗಳು, ಸಂಪ್ ಗಾರ್ಡ್‌ಗಳು ಮತ್ತು ಉದ್ದವಾದ ಸಿಂಗಲ್ ಸೀಟ್‌ ಈ ಬೈಕ್‌ಗಳಲ್ಲಿವೆ. ಎರಡು CNG ಬೈಕ್‌ನ ಫೋಟೋಗಳು ಈಗಾಗ್ಲೇ ವೈರಲ್‌ ಆಗಿವೆ.

ಎರಡು ರೂಪಾಂತರಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಬ್ರ್ಯಾಂಡ್‌ಗೆ ಹೆಚ್ಚಿನ ಮಾರಾಟದ ಪ್ರಮಾಣ. ಇದರಿಂದ ಕಂಪನಿಗೆ ಉತ್ತಮ ಆದಾಯವೂ ಸಿಗುತ್ತದೆ. ಸಿಎನ್‌ಜಿ ಬೈಕ್‌ಗಳ ಬೆಲೆಯ ಬಗ್ಗೆ ಅಧಿಕೃತ ಬೆಲೆ ಲಭ್ಯವಾಗಿಲ್ಲ. ಆದರೆ ಅಂದಾಜು 80,000 ರೂಪಾಯಿ ಇರಲಿದೆ. ಈ ಬೈಕ್‌ ಹೀರೋ ಸ್ಪ್ಲೆಂಡರ್ ಶ್ರೇಣಿಯೊಂದಿಗೆ ಸ್ಪರ್ಧಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read