ಅಯೋಧ್ಯೆ: ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಪನ್ನವಾಗಿದೆ. ಕೋಟ್ಯಂತರ ರಾಮ ಭಕ್ತರ ಶತಮಾನಗಳ ಕನಸು ನನಸಾಗಿದೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ಕಾಲ ಕೈಗೊಂಡಿದ್ದ ವಿಶೇಷ ವ್ರತವನ್ನು ಅಂತ್ಯಗೊಳಿಸಿದ್ದಾರೆ.
ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನವರಿ 12ರಿಂದ ವಿಶೇಷ ವ್ರತ ಕೈಗೊಂಡಿದ್ದರು. ಮುಂಜಾನೆ ಒಂದುಗಂಟೆ ವಿಶೇಷ ಅನುಷ್ಠಾನ, ಮಂತ್ರಪಠಣ ಮಾಡುತ್ತಿದ್ದರು, ಅಲ್ಲದೇ ಗೋಪೂಜೆ, ವಿವಿಧ ಮಂದಿರಗಳ ಭೇಟಿ ಸೇರಿದಂತೆ ವಿಶೇಷ ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದರು.
ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೆರವೇರಿದ್ದು, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ಗೋವಿಂದ ದೇವ್ ಗಿರಿ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಚರಣಾಮೃತ- ಭಗವಂತನ ಪಾದದಿಂದ ಬಂದ ಅಮೃತ ನೀಡಿದರು. ಚರಣಾಮೃತ ಸೇವನೆ ಮೂಲಕ ಪ್ರಧಾನಿ ಮೋದಿ 11 ದಿನಗಳ ವ್ರತ ಅಂತ್ಯಗೊಳಿಸಿದ್ದಾರೆ.