alex Certify BIG NEWS: ಅಯೋದ್ಯೆ ಬಳಿ ಭೀಕರ ಅಪಘಾತ: ಕಲಬುರಗಿ ಮೂಲದ ಮೂವರು ಭಕ್ತರು ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಯೋದ್ಯೆ ಬಳಿ ಭೀಕರ ಅಪಘಾತ: ಕಲಬುರಗಿ ಮೂಲದ ಮೂವರು ಭಕ್ತರು ದುರ್ಮರಣ

ಲಖನೌ: ಲಾರಿ ಹಾಗೂ ಟಿಟಿ ವಾಹನದ ನಡುವೆ ಅಯೋಧ್ಯೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಲಬುರಗಿ ಮೂಲದ ಮೂವರು ಭಕ್ತರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಮೃತ ದುರ್ದೈವಿಗಳು. ಅಪಘಾತದಲ್ಲಿ ಟಿಟಿಯಲ್ಲಿದ್ದ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಅಯೋಧ್ಯೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ಮೂಲದ ಒಂದೇ ಕುಟುಂಬದ 22 ಜನರು ಕಾಶಿ ಹಾಗೂ ಅಯೋಧ್ಯೆ ಯಾತ್ರೆಗೆ ತೆರಳಿದ್ದರು. ಕಾಶಿ ವಿಶ್ವನಾಥನ ದರ್ಶನ ಪಡೆದ ಬಳಿಕ ಟಿಟಿಯಲ್ಲಿ ಕಾಶಿಯಿಂದ ಅಯೋಧ್ಯೆಗೆ ತೆರಳುತ್ತಿದ್ದರು. ಈ ವೇಳೆ ತಡರಾತ್ರಿ ಅಯೋಧ್ಯೆ ಬಳಿ ಟಿಟಿ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...