ಶಿವಮೊಗ್ಗ: ಶಿವಮೊಗ್ಗದಲ್ಲಿ ಬೈಪಾಸ್ ರಸ್ತೆಯಲ್ಲಿ ನೂತನ ಸೇತುವೆ ಉದ್ಘಾಟನೆಯಾಗಿದ್ದು, ಈ ಬಗ್ಗೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ನೂತನ ಸೇತುವೆ ಕೆಲಸ ಪೂರ್ಣಗೊಂಡಿದೆಯೇ? ಪೂರ್ಣಗೊಂಡಿದ್ದರೆ ಕಂಪ್ಲೀಷನ್ ಸರ್ಟಿಫಿಕೇಟ್ ತೋರಿಸಿ ಎಂದು ಸಂಸದರಿಗೆ ನೇರವಾಗಿ ಪ್ರಶ್ನಿಸಿದ್ದಾರೆ.
ಸೇತುವೆ ಉದ್ಘಾಟನೆಯ ವೇಳೆ ನ್ಯಾಷನಲ್ ಹೈವೆಯ ಯಾವ ಅಧಿಕಾರಿಗಳೂ ಇಲ್ಲ. ಸೇತುವೆ ತಮ್ಮ ಖಾಸಗಿ ಸ್ವತ್ತು ಎಂಬ ರೀತಿಯಲ್ಲಿ ಸಂಸದರು ಹೋಗಿ ಉದ್ಘಾಟನೆ ಮಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಜೊತೆ ಬಿಜೆಪಿ ಕಾರ್ಯಕರ್ತರು ಮಾತ್ರ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಿಗಳ ಬಗ್ಗೆ ಕೇಳಿದರೆ ಸೇತುವೆ ಉದ್ಘಾಟನೆ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ ಎಂದಿದ್ದಾರೆ. ಶಿಷ್ಠಾಚಾರ ಉಲ್ಲಂಘನೆ ಮಾಡಿ ಸೇತುವೆ ಉದ್ಘಾಟಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಸೇತುವೆಯಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ಜಿಲ್ಲಾಧಿಕಾರಿಯನ್ನು ಹೊಣೆ ಮಡಲಾಗುತ್ತದೆ. ತರಾತುರಿಯಲ್ಲಿ ಸೇತುವೆ ಉದ್ಘಾಟನೆ ಮಾಡಿರುವ ಸಂಸದರ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.