alex Certify ಬೇಸಿಗೆಯಲ್ಲಿ ಈ 5 ಆಹಾರ ಪದಾರ್ಥಗಳಿಂದ ದೂರವಿರಿ; ಇಲ್ಲಾ ಅಂದರೆ ಎದುರಾಗುತ್ತೆ ಡಿಹೈಡ್ರೇಶನ್‌ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಈ 5 ಆಹಾರ ಪದಾರ್ಥಗಳಿಂದ ದೂರವಿರಿ; ಇಲ್ಲಾ ಅಂದರೆ ಎದುರಾಗುತ್ತೆ ಡಿಹೈಡ್ರೇಶನ್‌ ಸಮಸ್ಯೆ

ಬೇಸಿಗೆ ಕಾಲ ಬಂತೆಂದರೆ ಆಹಾರ ಪದ್ಧತಿಯತ್ತ ಗಮನ ಹರಿಸಲೇಬೇಕು. ಈ ಋತುವಿನಲ್ಲಿ ಸೂಕ್ತ ಆಹಾರ ಸೇವಿಸದೇ ಇದ್ದರೆ ಅನಾರೋಗ್ಯದ ಅಪಾಯ ಹೆಚ್ಚು. ಬೇಸಿಗೆಯಲ್ಲಿ ಫುಡ್‌ ಪಾಯ್ಸನಿಂಗ್‌, ಡಿಹೈಡ್ರೇಶನ್‌ನಂತಹ ಸಮಸ್ಯೆಗಳಾಗುತ್ತವೆ. ಆದ್ದರಿಂದ  ಆಹಾರದ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು. ಬೇಸಿಗೆಯಲ್ಲಿ ಕೆಲವು ಆಹಾರ ಉತ್ಪನ್ನಗಳನ್ನು ತ್ಯಜಿಸಬೇಕು. ಅವುಗಳನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.

ಅಧಿಕ ಖಾರ ಮತ್ತು ಮಸಾಲೆ

ಜನರು ಸಾಮಾನ್ಯವಾಗಿ ರುಚಿಗಾಗಿ ಖಾರದ ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಮಸಾಲೆಗಳು ಪ್ರತಿಯೊಂದು ಆಹಾರಕ್ಕೂ ಸುವಾಸನೆ ಮತ್ತು ರುಚಿ ಕೊಡುವುದು ಸುಳ್ಳಲ್ಲ. ಆದರೆ ಬೇಸಿಗೆಯಲ್ಲಿ ಅವುಗಳನ್ನು ತ್ಯಜಿಸುವುದು ಉತ್ತಮ. ಏಲಕ್ಕಿ, ಕಾಳುಮೆಣಸು, ಶುಂಠಿ, ಜೀರಿಗೆ, ಬೆಳ್ಳುಳ್ಳಿ ಮತ್ತು ಸಾಸಿವೆಯಂತಹ  ಮಸಾಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆಯು ಹೆಚ್ಚಾಗುತ್ತದೆ. ಇದರಿಂದಾಗಿ ದೇಹದೊಳಗಿನ ಶಾಖವು ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಮಾಂಸಾಹಾರ

ಸಮುದ್ರಾಹಾರ, ತಂದೂರಿ ತಿನಿಸುಗಳು, ಮಾಂಸ ಮತ್ತು ಮಟನ್ ತಿನ್ನಲು ರುಚಿಕರವಾಗಿದ್ದರೂ ಬೇಸಿಗೆಯಲ್ಲಿ ಎಚ್ಚರಿಕೆಯಿಂದ ಸೇವಿಸಬೇಕು. ಈ ವಸ್ತುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಬೇಗನೆ ಹಾಳಾಗುವ ಅಪಾಯವಿರುತ್ತದೆ. ಇದರಿಂದ ಫುಡ್‌ ಪಾಯ್ಸನಿಂಗ್‌ ಆಗಬಹುದು. ಬೇಸಿಗೆಯಲ್ಲಿ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ದೇಹವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ ಇವು ಉಷ್ಣದ ಪರಿಣಾಮ ಹೊಂದಿರುವುದರಿಂದ ದೇಹ ಡಿಹೈಡ್ರೇಟ್‌ ಆಗಬಹುದು.

ಜಂಕ್ ಫುಡ್

ಬೇಸಿಗೆಯಲ್ಲಿ ಕರಿದ ಪದಾರ್ಥಗಳಾದ ಸಮೋಸಾ, ಪಕೋಡ, ವಡಾ ಪಾವ್, ಜಂಕ್ ಫುಡ್ ಗಳಾದ ಪಿಜ್ಜಾ, ಬರ್ಗರ್ ಗಳನ್ನು ಜೀರ್ಣಿಸಿಕೊಳ್ಳಲು ದೇಹವು ಶ್ರಮಪಡಬೇಕಾಗುತ್ತದೆ. ಬೇಸಿಗೆಯಲ್ಲಿ ಕರಿದ ಆಹಾರವನ್ನು ತ್ಯಜಿಸುವುದು ಉತ್ತಮ. ಈ ಆಹಾರಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ಸಂಸ್ಕರಿಸಿದ ಆಹಾರದಲ್ಲಿ ಬಳಸುವ ಕೃತಕ ಸಿಹಿ ಮತ್ತು ರುಚಿಗಳು ದೇಹಕ್ಕೆ ಹಾನಿಕಾರಕ.

ಮದ್ಯ

ಮದ್ಯಪಾನವು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ. ಇದಲ್ಲದೆ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವ ಹೈಪೋಥಾಲಮಸ್ ಗ್ರಂಥಿಯ ಕೆಲಸವನ್ನು ನಿಧಾನಗೊಳಿಸುತ್ತದೆ. ಮದ್ಯಪಾನವು ಅತಿಯಾದ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಇದು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಆಲ್ಕೋಹಾಲ್ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಶಾಖದ ಹೊಡೆತವನ್ನು ಉಂಟುಮಾಡಬಹುದು.

ಚಹಾ ಮತ್ತು ಕಾಫಿ

ಚಹಾ ಮತ್ತು ಕಾಫಿ ಮನಸ್ಸನ್ನು ತಾಜಾ ಆಗಿಡುತ್ತದೆ. ಆದ್ದರಿಂದ ಹೆಚ್ಚಿನ ಜನರು ಚಹಾ ಅಥವಾ ಕಾಫಿಯೊಂದಿಗೆ ಬೆಳಗನ್ನು ಪ್ರಾರಂಭಿಸುತ್ತಾರೆ. ಸೀಮಿತ ಪ್ರಮಾಣದಲ್ಲಿ ಕೆಫೀನ್ ಸೇವನೆಯು ಪ್ರಯೋಜನಕಾರಿ. ಆದರೆ ಅತಿಯಾದರೆ ಚಹಾ ಮತ್ತು ಕಾಫಿ ಅಪಾಯಕಾರಿ. ಇವು ದೇಹದ ಉಷ್ಣತೆಯನ್ನು ಹೆಚ್ಚಿಸಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...