ಆಟೋ ಎಕ್ಸ್‌ಪೋ ದಲ್ಲಿ ಲಿಗರ್​ ಎಕ್ಸ್​ ಪ್ಲಸ್​ ಅನಾವರಣ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಎಕ್ಸ್‌ಪೋ 2023 ರಲ್ಲಿ ಲಿಗರ್​ ಎಕ್ಸ್ (Liger X) ಮತ್ತು ಲಿಗರ್​ ಎಕ್ಸ್​ ಪ್ಲಸ್​ (Liger X+) ಸ್ವಯಂ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಲಾಗಿದೆ. ಎಲೆಕ್ಟ್ರಿಕ್​ ವಾಹನ ತಯಾರಕ ಸಂಸ್ಥೆಯಾಗಿರುವ ಲಿಗರ್ ಮೊಬಿಲಿಟಿಯು ಇದನ್ನು ಅನಾವರಣಗೊಳಿಸಿದೆ.

Liger X ಮತ್ತು Liger X+ ಎಲೆಕ್ಟ್ರಿಕ್ ಸ್ಕೂಟರ್‌ಗಳು ಆಟೋಬ್ಯಾಲೆನ್ಸಿಂಗ್ ತಂತ್ರಜ್ಞಾನವನ್ನು ಹೊಂದಿವೆ. ಹೆಚ್ಚು ಆಸಕ್ತಿಕರ ಸಂಗತಿಯೆಂದರೆ, ಲಿಗರ್ ಎಕ್ಸ್‌ನಲ್ಲಿನ ಲಿಗರ್ ಮೊಬಿಲಿಟಿಯ ಆಟೋ ಬ್ಯಾಲೆನ್ಸಿಂಗ್ ತಂತ್ರಜ್ಞಾನ ಮತ್ತು ಲಿಗರ್ ಎಕ್ಸ್ + ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ವೇಗದಲ್ಲೂ ಕೆಲಸ ಮಾಡುತ್ತವೆ. ಇವೆರಡೂ ಸ್ಕೂಟರ್​ಗಳು ‘ಲರ್ನರ್ ಮೋಡ್’ ನೊಂದಿಗೆ ಬರುತ್ತವೆ.

ಲಿಗರ್ ಎಕ್ಸ್, ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು ಅದನ್ನು 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. Liger X ಎಲೆಕ್ಟ್ರಿಕ್ ಸ್ಕೂಟರ್ 65km/h ಸ್ಪೀಡ್​ ನೀಡಬಲ್ಲುದು. ಅಂತೆಯೇ, Liger X ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು 65km/h. Liger X+ ದೊಡ್ಡದಾದ ತೆಗೆಯಲಾಗದ ಬ್ಯಾಟರಿ ಪ್ಯಾಕ್ ಹೊಂದಿದೆ. ಚಾರ್ಜ್ ಮಾಡಲು ಇದು ನಾಲ್ಕೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Auto Expo 2023: Liger X, X+ Self Balancing eScooter

Liger X, X+ self-balancing electric scooters shown at Auto Expo 2023 | Autocar India

Auto Expo 2023: Liger X, X+ Self Balancing Electric Scooters Revealed - DriveSpark News

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read