ಎಂಜಿ ಮೋಟಾರ್‌ನ ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಸಾಹಸಪ್ರಿಯರನ್ನು ಸೆಳೆಯುತ್ತಿದೆ. ಇದು ಕಂಪನಿಯ ಅತ್ಯುತ್ತಮ ಕಾರುಗಳಲ್ಲೊಂದು. ಸೈಬರ್‌ಸ್ಟರ್ ಹೆಸರಿನ ಈ ಕಾರು ವಿಶೇಷವಾಗಿ ಯುವ ಪೀಳಿಗೆಯನ್ನು ಆಕರ್ಷಿಸುವಂತಿದೆ. ಭಾರತದಲ್ಲೂ ಈ ಕಾರು ಸಂಚಲನ ಮೂಡಿಸುವ ನಿರೀಕ್ಷೆಯಿದೆ.
ಈ ವರ್ಷದ ಆರಂಭದಲ್ಲಿ ‘ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್’ ನಲ್ಲಿ ಕಾರಿನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶಿಸಲಾಗಿದೆ. ಇದೀಗ ಕಂಪನಿ ಈ ಎಲೆಕ್ಟ್ರಿಕ್ ರೋಡ್‌ಸ್ಟರ್‌ನ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಮುಂದಿನ ವರ್ಷ ಈ ಕಾರಿನ ಮಾರಾಟ ಆರಂಭವಾಗಬಹುದು.
MG ಸೈಬರ್‌ಸ್ಟರ್‌ನ ವಿನ್ಯಾಸವು ಅತ್ಯಂತ ಆಕರ್ಷಕ ಮತ್ತು ಆಧುನಿಕವಾಗಿದೆ. ಸ್ಪೋರ್ಟ್ಸ್ ಕಾರಿನ ಫೀಚರ್‌ಗಳ ಜೊತೆಗೆ ಭವಿಷ್ಯದ ಸ್ಪರ್ಷವಿದೆ. ಕಾರಿನ ಆಕಾರ ಕೂಡ ಬಹಳ ಸುಂದರವಾಗಿದೆ. ಇದು ಸುಧಾರಿತ ಎಲ್ಇಡಿ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ. ತೆಳುವಾದ ಹೆಡ್ಲೈಟ್ಸ್ ಮತ್ತು ಹಿಂಭಾಗದಲ್ಲಿ ತೇಲುವ ಲೈಟ್‌ಬಾರ್ ಅನ್ನು ಒಳಗೊಂಡಿದೆ. MG ಸೈಬರ್‌ಸ್ಟರ್ ಅನ್ನು ಕನ್ವರ್ಟಿಬಲ್ ವಿನ್ಯಾಸದಲ್ಲಿ ಪರಿಚಯಿಸಲಾಗಿದೆ. ಇದು ಸವಾರರಿಗೆ ಸ್ಪೋರ್ಟಿ ಮತ್ತು ಐಷಾರಾಮಿ ಅನುಭವವನ್ನು ನೀಡುತ್ತದೆ.
ಕಾರಿಗೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಈ ಸೆಟಪ್ 528 bhp ಗರಿಷ್ಠ ಶಕ್ತಿ ಮತ್ತು 725 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ ಈ ಕಾರು 3.2 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ 100 ಕಿಮೀ ವೇಗವನ್ನು ಪಡೆಯಬಲ್ಲದು.
MG ಸೈಬರ್‌ಸ್ಟರ್ 77 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 570 ಕಿಲೋಮೀಟರ್‌ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಓಪನ್-ಟಾಪ್ ಸ್ಪೋರ್ಟ್ಸ್ ಕಾರಿನ ತೂಕ 1,984 ಕೆಜಿಯಷ್ಟಿದೆ.
ಇದು 2,689 mm ವ್ಹೀಲ್‌ಬೇಸ್‌ನೊಂದಿಗೆ ಬರಲಿದೆ. ಇದು ಹಿಂಬದಿ-ಚಕ್ರ ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ. ಸೈಬರ್‌ಸ್ಟರ್‌ನ RWD ರೂಪಾಂತರವು ಒಂದೇ ಚಾರ್ಜ್‌ನಲ್ಲಿ 519 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.
4-ಪಿಸ್ಟನ್ ಸ್ಥಿರ ಕ್ಯಾಲಿಪರ್‌ಗಳು, ಬ್ರೆಂಬೊ ಬ್ರೇಕ್‌ಗಳು ಮತ್ತು ಹೆಚ್ಚು ಕಠಿಣವಾದ ರೋಲ್‌ಬಾರ್ ಈ ಕಾರಿನ ವಿಶೇಷತೆ. ಬಾಸ್ ಆಡಿಯೊ ಸಿಸ್ಟಮ್ ಮತ್ತು ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 8155 ಚಿಪ್-ಚಾಲಿತ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ಕಾರಿನಲ್ಲಿ ಅಳವಡಿಸಲಾಗಿದೆ.