alex Certify ರಾಜ್ಯದ ರೈತರೇ ಗಮನಿಸಿ : ಸಬ್ಸಿಡಿ ದರದಲ್ಲಿ ‘ಸೌರ ಪಂಪ್ ಸೆಟ್’ ಪಡೆಯಲು ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ರೈತರೇ ಗಮನಿಸಿ : ಸಬ್ಸಿಡಿ ದರದಲ್ಲಿ ‘ಸೌರ ಪಂಪ್ ಸೆಟ್’ ಪಡೆಯಲು ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ.!

ಬೆಂಗಳೂರು : ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸೌರ ಪಂಪ್ ಸೆಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..? ಇದಕ್ಕೆ ಏನೆಲ್ಲಾ ದಾಖಲೆಗಳು ಬೇಕು..? ಇಲ್ಲಿದೆ ಮಾಹಿತಿ.

ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್ಸೆಟ್ ಯೋಜನೆ ಇದಾಗಿದೆ.. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಬಿ ಯೋಜನೆ ರೂಪಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?

ರೈತರು ತಮ್ಮ ಆಧಾರ್, ಆರ್ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು.
ರೈತರ ನೋಂದಣಿ ಸಮಸ್ಯೆ ಪರಿಹರಿಸಲು ಕ್ರೆಡಲ್ನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು ದೂರವಾಣಿ ಸಂಖ್ಯೆ 080-22202100 ಸಂಪರ್ಕಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)
ನಿಗಮ ಕಛೇರಿ, ನವನಗರ ಪಿ.ಬಿ ರಸ್ತೆ, ಹುಬ್ಬಳ್ಳಿ 580025 : 0836 – 2222535: hescom.Karanataka.gov.in
• 2-2: hescom@gmail.com

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...