ಮಡಿಕೇರಿ : ಕೇಂದ್ರ ಸರ್ಕಾರವು 2018-19 ನೇ ಸಾಲಿನ ಬಜೆಟ್ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರಿಕೆ ಚಟುವಟಿಕೆ ಹಾಗೂ ಮೀನು ಕೃಷಿಕರಿಗೆ ವಿಸ್ತರಣೆ ಮಾಡಿ ಘೋಷಿಸಿದೆ.
ಈ ಯೋಜನೆಯಡಿ ಮೀನು ಕೃಷಿಕರು ಅಲ್ಪಾವದಿ ಸಾಲವನ್ನು ಬ್ಯಾಂಕ್ಗಳ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪಡೆಯಬಹುದಾಗಿದೆ. ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿರುವ ರೈತರು ಮೀನುಗಾರಿಕೆ ಚಟುವಟಿಕೆಗಳಿಗೂ ಬ್ಯಾಂಕ್ಗಳಿಂದ ಅಲ್ಪಾವದಿ ಸಾಲವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಸಾಲದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಸೆಪ್ಟೆಂಬರ್, 15 ರೊಳಗೆ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಇಲಾಖೆಗೆ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಉಪ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನ
ಮಡಿಕೇರಿ : ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು, ಇಲಾಖೆಗೆ ಖಾಲಿ ಇರುವ 06 ಉಪ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮೇಜರ್/ ಲೆಫ್ಟಿನೆಂಟ್ ಕರ್ನಲ್ ಅಥವಾ ನೌಕಾ ಸೇನಾ ಮತ್ತು ವಾಯು ಸೇನೆಯಲ್ಲಿ ತತ್ಸಮಾನ ರ್ಯಾಂಕ್‍ನಿಂದ ಬಿಡುಗಡೆ/ ನಿವೃತ್ತಿ ಹೊಂದಿರುವ, ದಿನಾಂಕ 01/01/2024 ಕ್ಕೆ 52 ವರ್ಷದೊಳಗಿನ ವಯೋಮಾನದ, ಎಸ್‍ಎಸ್‍ಎಲ್‍ಸಿ/ ತತ್ಸಮಾನ ತರಗತಿಯಲ್ಲಿ ಒಂದು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ ತೇರ್ಗಡೆಯಾದ ಸೈನ್ಯಾಧಿಕಾರಿಗಳು ಸೆಪ್ಟೆಂಬರ್, 16 ರೊಳಗೆ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ, ಕಚೇರಿಗೆ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿ ಕಛೇರಿಯಲ್ಲಿ ಖುದ್ದಾಗಿ ಪಡೆದುಕೊಳ್ಳಬಹುದಾಗಿದೆ ಹಾಗೂ ಹೆಚ್ಚಿನ ವಿವರಕ್ಕೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಇವರ ದೂ.ಸಂ.080-25589459 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.