ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಮತ್ತು ಕಾರ್ಯಕರ್ತರು ಯಾವುದೇ ಅನುಮತಿ ಪತ್ರ ಪಾಸ್ ಗಳಿಲ್ಲದೆ ಸುವರ್ಣ ಸೌಧದೊಳಗೆ ನುಗ್ಗಿ ಗಲಾಟೆ ಮಾಡಿದ ಪ್ರಕರಣ ಭದ್ರತಾ ಲೋಪವನ್ನು ಬಯಲು ಮಾಡಿದಂತಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಕಾರ್ ಅಡ್ಡಗಟ್ಟಿದದ ಸಚಿವೆಯ ಬೆಂಬಲಿಗರು ಸುವರ್ಣ ಸೌಧದೊಳಗೆ ಪ್ರತಿಭಟನೆ ನಡೆಸಿದ್ದಾರೆ. ನಂತರ ಏಕಾಏಕಿ ಸುವರ್ಣ ಸೌಧದೊಳಗೆ ನುಗ್ಗಿದ್ದಾರೆ. ಪರಿಷತ್ ಸಭಾಂಗಣಕ್ಕೆ ನುಗ್ಗಲು ಕೂಡ ಯತ್ನಿಸಿದ್ದಾರೆ. ಸಿ.ಟಿ. ರವಿ ಅವರನ್ನು ಎಳೆದಾಡಲು ಮುಂದಾಗಿದ್ದು, ಮಾರ್ಷಲ್ ಗಳ ರಕ್ಷಣೆಯಿಂದಾಗಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಗೇಟ್ ಗಳಿಗೆ ಬೀಗ ಹಾಕಿ ಭದ್ರತೆ ಹೆಚ್ಚಿಸಲಾಗಿದೆ.
ಜನಸಾಮಾನ್ಯರು ಪ್ರವೇಶ ಪತ್ರ ಇಲ್ಲದೆ ವಿಧಾನಸೌಧದ ಮುಖ್ಯ ಗೇಟ್ ಬಳಿ ಸುಳಿದಾಡಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸುವರ್ಣಸೌಧದ ಬಳಿ ಪ್ರತಿಭಟನಾಕಾರರು ಒಳನುಗ್ಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಪರಿಷತ್ ಸಭಾಂಗಣಕ್ಕೆ ನುಗ್ಗಲು ಯತ್ನಿಸಿದ್ದು, ಹೊರಗೂ ಸರಣಿ ಪ್ರತಿಭಟನೆ ನಡೆಸಲಾಗಿದೆ. ಮಾರ್ಷಲ್ ಗಳು ಸಿ.ಟಿ. ರವಿ ಅವರಿಗೆ ರಕ್ಷಣೆ ನೀಡಿ ಗಮನ ಸೆಳೆದಿದ್ದಾರೆ.