ಲಿಬಿಯಾದ ಅತ್ಯಂತ ಜನಪ್ರಿಯ ಖಾದ್ಯವಾದ couscous ದಿನಾಚರಣೆಯು ಇತ್ತೀಚೆಗೆ ನಡೆಯಿತು. ಈ ಬಾರಿ couscous ಖಾದ್ಯವು ವಿಶ್ವ ದಾಖಲೆ ಮುರಿದಿದೆ. ನೌದಿಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 5,500 ಪೌಂಡ್‌ಗಳಷ್ಟು (ಅಂದಾಜು 2500 ಕೆಜಿ) ತೂಗುವ ಖಾದ್ಯವನ್ನು ತಯಾರಿಸಲಾಗಿದೆ.
ಈ ಖಾದ್ಯ ತಯಾರಿಸಲು ಅನೇಕ ಬಾಣಸಿಗರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಲಿಬಿಯಾದ ಸಬ್ರತಾ ನಗರದಲ್ಲಿ ವಿಶ್ವ ದಾಖಲೆಯನ್ನು ಬರೆಯಲಾಗಿದೆ.
ಅಷ್ಟಕ್ಕೂ ಈ ದಿನವನ್ನು ಲಿಬಿಯನ್ನಿನ ಶ್ರೀಮಂತ ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನು ಸ್ಮರಿಸಲು ವಾರ್ಷಿಕವಾಗಿ ಆಚರಿಸಲಾಗುತ್ತದೆ. ರೆಕಾರ್ಡ್ ಬ್ರೇಕಿಂಗ್ ಖಾದ್ಯವನ್ನು ಜನರು ಸವಿಯುತ್ತಿರುವುದನ್ನು ತೋರಿಸುವ ಈವೆಂಟ್‌ನ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.
ಈ ಭಕ್ಷ್ಯವನ್ನು ಒಟ್ಟು 20 ಬಾಣಸಿಗರು ತಯಾರಿಸಿದ್ದಾರೆ. ಭಕ್ಷ್ಯದ ಜೊತೆಗೆ, ಅನೇಕ ಕಾರ್ಯಕ್ರಮಗಳನ್ನು ಹಾಗೂ ಸ್ಪರ್ಧೆಗಳನ್ನು, ಕುದುರೆ ಸವಾರಿ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.