ವಿಧಾನಸಭೆ ಚುನಾವಣೆಯಲ್ಲಿ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುವುದು. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾನ ಮಾಡಲು ಆಗಮಿಸುವ ಮತದಾರರ ಎಡಗೈ ತೋರು ಬೆರಳಿಗೆ ಗುರುತು ಹಾಕಲಾಗುತ್ತದೆ.
ಚುನಾವಣೆ ನಿಯಮದ ಪ್ರಕಾರ ಯಾವುದೇ ಪಕ್ಷದವರು ಹಾಗೂ ಅಭ್ಯರ್ಥಿಗಳು ಮತದಾರರನ್ನು ಕ್ಷೇತ್ರದ ಹೊರಗಿನಿಂದ ಅಥವಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಮಾಡಲು ವಾಹನಗಳಲ್ಲಿ ಕರೆದುಕೊಂಡು ಬರುವಂತಿಲ್ಲ.
ಈ ರೀತಿ ಕರೆದುಕೊಂಡು ಬರುವುದು ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆ ಅನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಮತದಾರರು ಯಾವುದೇ ಆಸೆ. ಆಮಿಷ, ಪ್ರಭಾವ, ಬೆದರಿಕೆಗೆ ಮಣಿಯದೆ ಸ್ಚ ಇಚ್ಛೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಚುನಾವಣಾ ಆಯೋಗ ಕೋರಿದೆ.