ಚಿಕ್ಕಬಳ್ಳಾಪುರ : ಬಿಜೆಪಿ ನಾಯಕ ಅಶ್ವತ್ ನಾರಾಯಣ್ ರನ್ನು ನೇಣಿಗೆ ಹಾಕಬೇಕು ಎಂದು ಕಾಂಗ್ರೆಸ್ ನಾಯಕ ‘ವೀರಪ್ಪ ಮೊಯ್ಲಿ’ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ .
ಚಿಕ್ಕಬಳ್ಳಾಪುರದಲ್ಲಿ ಅವರು ಮಾತನಾಡುತ್ತಿರುವ ವೇಳೆ ಈ ತರಹದ ಹೇಳಿಕೆ ನೀಡಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿ ಅಶ್ವಥ್ ನಾರಾಯಣ್ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ನೇಮಕ ಮಾಡಿಲ್ಲ. ಅವರು ಶಿಕ್ಷಣ ಮಂತ್ರಿಯಾಗಿ ಏನೂ ಮಾಡಿಲ್ಲ, ಶಿಕ್ಷಣದ ಹೆಸರಿನಲ್ಲಿ ರಾಜಕೀಯ ಮಾಡಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. HD ಕುಮಾರಸ್ವಾಮಿ ಪೆನ್ ಡ್ರೈವ್ನಲ್ಲಿ ಇರುವುದು ಬಾಂಬ್ ಅಲ್ಲ ಟುಸ್ ಪಟಾಕಿ, ಕುಮಾರಸ್ವಾಮಿ ಈ ತರಹ ಹಲವು ಬಾರಿ ಹೇಳಿದ್ದಾರೆ. ಸೋಲಿನ ಹತಾಷೆಯಿಂದ ಕಂಗೆಟ್ಟ ಕುಮಾರಸ್ವಾಮಿ ಈ ತರಹದ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ವಿರುದ್ಧ ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೋಷಾವೇಷ
ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣದ ವಿಚಾರವಾಗಿ ವಿಧನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವೆ ವಾಗ್ವಾದ ತಾರಕಕ್ಕೇರಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಕುಮಾರಸ್ವಾಮಿ ರೋಷಾವೇಷ ವ್ಯಕ್ತಪಡಿಸಿದ್ದಾರೆ.
ಬಸ್ ಚಾಲಕ ಜಗದೀಶ್ ಕುಟುಂಬದ ಜೊತೆ ನಾನು ಏನು ಮಾತನಾಡಿದ್ದೇನೆ. ವೈದ್ಯರ ಜೊತೆ ಏನು ಮಾತನಾಡಿದ್ದೇನೆ ಎಂಬ ಬಗ್ಗೆ ವಾಯ್ಸ್ ರೆಕಾರ್ಡ್ ಇದೆ. ನಾನು ಲಕ್ಷಾಂತರ ಬಡ ಕುಟುಂಬಗಳ ಜೀವ ಉಳಿಸಿದವನು ಇವರ ರೀತಿ ಕೊಲೆಗೆಡುಕನಲ್ಲ. ಪ್ರಕರಣದ ತನಿಖೆಯಾಗುವವರೆಗೆ ಸಚಿವರು ರಾಜಿನಾಮೆ ಕೊಟ್ಟು ಹೊರಗಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ.ಕೆ ಕೊಲೆಗೆಡುಕ ಪದಕ್ಕೆ ಶಾಸಕ ಹೆಚ್.ಸಿ.ಬಾಲಕೃಷ್ಣ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ನಮ್ಮ ಹಂಗಿನಲ್ಲಿ ಸಿಎಂ ಆದವರು ಎಂದು ಚಲುವರಾಯಸ್ವಾಮಿ ಹೇಳುತ್ತಿದ್ದಂತೆ ಇನ್ನಷ್ಟು ಕೆರಳಿ ಕೆಂಡವಾದ ಮಾಜಿ ಸಿಎಂ ಕುಮಾರಸ್ವಾಮಿ, ನಾನು, ದೇವೇಗೌಡರು ಕಾಂಗ್ರೆಸ್ ನಿಂದ ಸಿಎಂ ಆಗಿಲ್ಲ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣಕ್ಕೆ ಸಚಿವರಾಗಿದ್ದ ಈಶ್ವರಪ್ಪನವರಿಂದ ಕಿತ್ತೋದ್ ಕಾಂಗ್ರೆಸ್ಸಿಗರು ರಾಜಿನಾಮೆ ಕೊಡಿಸಿದರು. ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ ಎಂದು ರೋಷಾವೇಷ ವ್ಯಕ್ತಪಡಿಸಿದರು.