Watch Video | ವೇದಿಕೆಯಲ್ಲೇ ಗಾಯಕ ಅರ್ಜಿತ್ ಸಿಂಗ್ ಕೈ ಹಿಡಿದೆಳೆದ ಯುವತಿ

ಅರ್ಜಿತ್ ಸಿಂಗ್ ತಮ್ಮ ಸುಮಧುರ ಕಂಠದ ಗಾಯನದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಔರಂಗಾ ಬಾದ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದ ವೇಳೆ ದುರದೃಷ್ಟಕರ ಘಟನೆ ನಡೆದಿದೆ. ಮಹಿಳಾ ಅಭಿಮಾನಿಯೊಬ್ಬರು ಅರ್ಜಿತ್ ಸಿಂಗ್ ಕೈಯನ್ನು ಹಿಡಿದು ಎಳೆದ ಕಾರಣ ಗಾಯಕ ಗಾಯಗೊಂಡಿದ್ದಾರೆ. ಆದರೂ, ಗಾಯಕನ ವಿನಮ್ರ ಸ್ವಭಾವವು ನೆಟ್ಟಿಗರ ಹೃದಯ ಗೆದ್ದಿದೆ.

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಸುಮಧುರವಾದ ಧ್ವನಿಯೊಂದಿಗೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ವೇಳೆ ಯುವತಿಯೊಬ್ಬರು ಗಾಯಕನ ಕೈಯನ್ನು ಹಿಡಿದು ಎಳೆದಿದ್ದಾರೆ.

ನೀವು ಇದನ್ನು ಅರ್ಥಮಾಡಿಕೊಳ್ಳಬೇಕು. ನನ್ನ ಮಾತು ಕೇಳಿ…… ನೀವು ಮೋಜು ಮಾಡುತ್ತಿದ್ದೀರಿ, ಅದು ಸರಿ. ಆದರೆ, ನನಗೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ನೀವು ಹೇಗೆ ಆನಂದಿಸುತ್ತೀರಿ? ನೀವು ವಯಸ್ಕ ಮತ್ತು ಪ್ರಬುದ್ಧ ವ್ಯಕ್ತಿ ಅಲ್ಲವೇ? ನನ್ನ ಕೈಯನ್ನು ಏಕೆ ಎಳೆದಿರಿ? ನಾನು ಹೊರಡಬೇಕೇ ಎಂದು ಅರ್ಜಿತ್ ಸಿಂಗ್ ಪ್ರಶ್ನಿಸಿದ್ದಾರೆ. ಇದಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಬೇಡ ಎಂದು ಕೂಗಿದ್ದಾರೆ.

ಇನ್ನೊಬ್ಬ ಅಭಿಮಾನಿ ಅರ್ಜಿತ್ ಸಿಂಗ್ ಗಾಯಗೊಂಡ ಕೈಯ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗಾಯಕನ ತಾಳ್ಮೆ ಮತ್ತು ಶಾಂತತೆಗಾಗಿ ಅಭಿಮಾನಿಗಳು ಅವರನ್ನು ಶ್ಲಾಘಿಸಿದ್ದಾರೆ. ಮಹಿಳೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ.

https://twitter.com/SinghfanArijit/status/1655435037939052547?ref_src=twsrc%5Etfw%7Ctwcamp%5Etweetembed%7Ctwterm%5E1655435037939052547%7Ctwgr%5Ed720f79fd913f38ffba1a5378ee5f5620f46138f%7Ctwcon%5Es1_&ref_url=https%3A%2F%2Fwww.dnaindia.com%2Fbollywood%2Freport-arijit-singh-injured-during-live-concert-in-aurangabad-after-female-fan-pulls-his-hand-netizens-demand-strict-3041058

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read