
ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ.
ಹಾಗಾದರೆ ಯಾವುದು ಆ ಆಹಾರ ಅಂತ ತಿಳಿದುಕೊಳ್ಳೋಣ.
ಧಾನ್ಯಗಳು
ಏಕಾಗ್ರತೆ ಮತ್ತು ಗಮನವನ್ನು ಕೇಂದ್ರೀಕರಿಸಲು ಧಾನ್ಯಗಳ ಸೇವನೆ ಸಹಕಾರಿ. ದೇಹದ ಇತರ ಅಂಗಗಳಂತೆ ಮೆದುಳು ಕೂಡ ಶಕ್ತಿಯಿಲ್ಲದೆ ಕೆಲಸ ಮಾಡುವುದಿಲ್ಲ. ಆದ್ದರಿಂದ ಧಾನ್ಯಗಳು ಆಹಾರದಲ್ಲಿ ಹೆಚ್ಚಿರಲಿ.
ಮೀನು
ಆರೋಗ್ಯಕರ ಮೆದುಳಿನ ಕಾರ್ಯವನ್ನು ಉತ್ತೇಜಿಸಲು ಮೀನು ಸೇವನೆ ಸಹಕಾರಿ. ಒಮೆಗಾ -3, ಎಣ್ಣೆಯುಕ್ತ ಮೀನುಗಳಲ್ಲಿ ಸ್ವಾಭಾವಿಕವಾಗಿ ಸಿಗುತ್ತದೆ. ಸೋಯಾ ಬೀನ್ಸ್, ವಾಲ್ನಟ್ಸ್‌ಗಳ ಸೇವನೆಯೂ ಸೂಕ್ತ.
ಬೆರ್ರಿ ಹಣ್ಣುಗಳು
ಅಲ್ಪಾವಧಿಯ ಸ್ಮರಣೆಯನ್ನು ಹೆಚ್ಚಿಸಲು ಸಹಾಯಕವಾಗಬಹುದು. ಬೆರ್ರಿ ಹಣ್ಣುಗಳು ಸೇವಿಸುವುದರಿಂದ ಪರೀಕ್ಷೆ ಸಮಯದಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಮೊಟ್ಟೆ
ಮೆದುಳಿನ ಕುಗ್ಗುವಿಕೆಯನ್ನು ಕಡಿಮೆ ಮಾಡುತ್ತದೆ. ಪರೀಕ್ಷೆ ಸಮಯದಲ್ಲಿ ಸಾಕಷ್ಟು ಮೊಟ್ಟೆಯ ಆಹಾರ ಸೇವಿಸಿ.
ಕುಂಬಳಕಾಯಿ ಬೀಜ
ಜಿಂಕ್ ಅಂಶವನ್ನು ಹೇರಳವಾಗಿ ಹೊಂದಿರುವ ಇದು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಒತ್ತಡ ನಿವಾರಿಸಿ ಮೂಡನ್ನು ಕೂಡ ಉತ್ತೇಜಿಸುತ್ತದೆ.
ಬ್ಲ್ಯಾಕ್ ಕರಂಟ್
ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದು ಸಹಕಾರಿ. ವಿಟಮಿನ್ ಸಿ ಅಂಶವಿರುವ ಇದು ದೀರ್ಘ ಕಾಲದವರೆಗೆ ಮಾನಸಿಕ ಚುರುಕುತನವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.