ಹೊಕ್ಕಳಿಗೆ ಸುಗಂಧ ಹಾಕುವುದ್ರಿಂದ ಪ್ರಾಪ್ತವಾಗುತ್ತೆ ಶುಭ ಲಾಭ

ವ್ಯಕ್ತಿಯ ಜಾತಕದಲ್ಲಿರುವ ಗ್ರಹಗಳ ಪ್ರಭಾವ ವ್ಯಕ್ತಿ ಜೀವನದ ಮೇಲಾಗುತ್ತದೆ. ಗ್ರಹಗಳು ದುರ್ಬಲವಾಗಿದ್ದರೆ ವ್ಯಕ್ತಿ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಹಗಳು ಬಲವಾಗಿದ್ದರೆ ಶುಭ ಫಲ, ಅದೃಷ್ಟ ಪ್ರಾಪ್ತಿಯಾಗುತ್ತದೆ.

ಯಾರ ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿರುತ್ತದೆಯೋ ಆ ವ್ಯಕ್ತಿ ಧನ ಹಾಗೂ ಸಂಪತ್ತಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಪುರಾಣದ ಪ್ರಕಾರ ಮನುಷ್ಯನ ಜನ್ಮ ವಿಷ್ಣುವಿನ ಹೊಕ್ಕಳಿನಿಂದಾಗಿದೆ. ಹಾಗಾಗಿ ಇದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬೈಬಲ್ ನಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ.

ಶುಕ್ರ ಗ್ರಹ ಹಾಗೂ ಹೊಕ್ಕಳಿಗೂ ಸಂಬಂಧವಿದೆ. ಹೊಕ್ಕಳಿಗೆ ಕೆಲ ಸುಗಂಧವನ್ನು ಹಾಕುವುದ್ರಿಂದ ಶುಭ ಲಾಭ ಪ್ರಾಪ್ತಿಯಾಗುತ್ತದೆ. ಶಾಸ್ತ್ರಗಳ ಪ್ರಕಾರ ಹೊಕ್ಕಳಿಗೆ ಸುಗಂಧವನ್ನು ಹಾಕುವುದ್ರಿಂದ ವ್ಯಕ್ತಿಗೆ ಎಂದೂ ಧನ, ಐಶ್ವರ್ಯದ ಕೊರತೆ ಎದುರಾಗುವುದಿಲ್ಲ.

ಚಂದನ, ಗುಲಾಬಿ ಸುಗಂಧವನ್ನು ಹೊಕ್ಕಳಿಗೆ ಹಾಕುವುದ್ರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.

ಚಂದನದ ಸುಗಂಧವನ್ನು ಹೊಕ್ಕಳಿಗೆ ಹಾಕುವುದ್ರಿಂದ ಕೋಪ ಕಡಿಮೆಯಾಗುತ್ತದೆ. ಅನಿದ್ರೆ ಸಮಸ್ಯೆ ದೂರವಾಗುತ್ತದೆ ಎಂದು ನಂಬಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read