ಮುಖದ ಮೇಲೆ ಮೂಡುವ ಮಚ್ಚೆಗಳು ಅಥವಾ ಕಂದು ಬಣ್ಣದ ಚುಕ್ಕೆಗಳಿಗೆ ಫ್ರೆಕ್ಕ್ಲೆಸ್ ಎನ್ನುತ್ತೇವೆ. ಬಿಸಿಲಿಗೆ ಇವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಇವುಗಳಿಂದ ಮುಕ್ತಿ ಪಡೆಯಲು ಉತ್ತಮ ಆಹಾರ ಸೇವನೆ ಬಹಳ ಅಗತ್ಯ. ಮನೆಮದ್ದುಗಳ ಮೂಲಕವೂ ಇದನ್ನು ನಿವಾರಿಸಬಹುದು.
ಮೊದಲಿಗೆ ಮೂರು ಚಮಚ ನಿಂಬೆ ರಸ ತೆಗೆದುಕೊಂಡು ಫ್ರೆಕ್ಕ್ಲೆಸ್ ಗಳ ಮೇಲೆ ಮಸಾಜ್ ಮಾಡಿ. 10 ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
ಅಂಟಿ ಅಕ್ಸಿಡೆಂಟ್ ಗಳು ಹೆಚ್ಚಿರುವ ಪುದೀನಾ ಸೊಪ್ಪನ್ನು ಬಾಳೆಹಣ್ಣಿನ ಜೊತೆ ಬಳಸಿಯೂ ಉತ್ತಮ ಪರಿಣಾಮ ಪಡೆಯಬಹುದು. ಪುದೀನಾ ಸೊಪ್ಪನ್ನು ಸ್ವಚ್ಛಗೊಳಿಸಿ ಮಿಕ್ಸಿಗೆ ಹಾಕಿ ರುಬ್ಬಿ. ಇದಕ್ಕೆ ಬಾಳೆಹಣ್ಣು ಸೇರಿಸಿ ಕಿವುಚಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ 10 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ.
ಮಜ್ಜಿಗೆಯಲ್ಲಿ ಚರ್ಮಕ್ಕೆ ತೇವಾಂಶ ಒದಗಿಸುವ ಗುಣವಿದೆ. ಮಜ್ಜಿಗೆಗೆ ಓಟ್ ಮೀಲ್ ಹಾಕಿ ಕಲಸಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷ ಬಳಿಕ ತೊಳೆಯಿರಿ. ಇದನ್ನು ದಿನಕ್ಕೆರಡು ಬಾರಿ ಮಾಡಿ, ಪರಿಣಾಮ ನೋಡಿ.