alex Certify ಕಣ್ಣಿನ ಸುತ್ತ ಚರ್ಮ ಶುಷ್ಕವಾಗಿದ್ದರೆ ಹಚ್ಚಿ ಈ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ಸುತ್ತ ಚರ್ಮ ಶುಷ್ಕವಾಗಿದ್ದರೆ ಹಚ್ಚಿ ಈ ಮನೆ ಮದ್ದು

ನಿದ್ರೆ ಸರಿಯಾಗಿ ಮಾಡದಿದ್ದಾಗ, ಕೆಲಸದ ಒತ್ತಡದಿಂದ, ಅತಿಯಾಗಿ ಮೊಬೈಲ್ , ಲ್ಯಾಪ್ ಟಾಪ್ ಗಳನ್ನು ನೋಡುವುದರಿಂದ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ಕಣ್ಣಿನ ಸುತ್ತಲಿನ ಚರ್ಮ ಶುಷ್ಕವಾಗಿ ಡಲ್ ಆಗಿ ಕಾಣುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ.

*ಸೌತೆಕಾಯಿ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದಕಾರಣ 2 ಚಮಚ ಸೌತೆಕಾಯಿ ರಸಕ್ಕೆ ಹತ್ತಿಯ ಪ್ಯಾಡ್ ಗಳನ್ನು ಅದ್ದಿ ಅದನ್ನು 10 ನಿಮಿಷ ಕಣ್ಣಿನ ಮೇಲೆ ಇಟ್ಟುಕೊಳ್ಳಿ

*ರೋಸ್ ವಾಟರ್ ಕಣ್ಣಿನ ಸುತ್ತಲಿನ ಚರ್ಮವನ್ನು ತೇವಾಂಶಗೊಳಿಸುತ್ತದೆ. ಹಾಗಾಗಿ ರೋಸ್ ವಾಟರ್ ನ್ನು ಹತ್ತಿಯ ಪ್ಯಾಡ್ ಗಳ ಸಹಾಯದಿಂದ ತೆಗೆದು ಕಣ್ಣಿನ ಮೇಲೆ ಇಟ್ಟುಕೊಳ್ಳಿ.

*ಆಲಿವ್ ಆಯಿಲ್ ಚರ್ಮದ ತೇವಾಂಶವನ್ನು ಕಾಪಾಡುತ್ತದೆ, ಹಾಗಾಗಿ ಕಣ್ಣಿನ ಸುತ್ತಲೂ ಆಲಿವ್ ಆಯಿಲ್ ನ್ನು ಹಚ್ಚಿ. ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ.

*ಹಾಲಿನ ಕೆನೆಗೆ ಜೇನುತುಪ್ಪ ಮಿಕ್ಸ್ ಮಾಡಿ ಕಣ್ಣಿನ ಸುತ್ತಲೂ ಹಚ್ಚಿ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ವಾಶ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...