ಧಾರವಾಡ: ಧಾರವಾಡ ಜಿಲ್ಲೆಯ ಅಧೀನ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ 02 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ 11 ತಜ್ಞ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬೇಕಾದ ಹಿನ್ನಲೇಯಲ್ಲಿ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ನೇಮಕಾತಿಯನ್ನು ನೇರ ಸಂದರ್ಶನ ಮುಖಾಂತರ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲಾಗುವದು. ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಅಥವಾ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಹೊಂದಿದ ಆಸಕ್ತ ಅಭ್ಯರ್ಥಿಗಳು ಜೂನ್ 18, 2024 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಗವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕೆ,ಸಿ.ಪಾರ್ಕ್ ಹತ್ತಿರ ಧಾರವಾಡ ಇಲ್ಲಿ ಖುದ್ದಾಗಿ ನೇರ ಸಂದರ್ಶನಕ್ಕೆ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಯೊಂದಿಗೆ ಹಾಜರಾಗಿ ಅರ್ಜಿಯನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಎಲ್ಲ ದಾಖಲಾತಿಗಳ ನಕಲು ಪ್ರತಿಯನ್ನು ಸಲ್ಲಿಸುವದು ಕಡ್ಡಾಯವಾಗಿದೆ.
ಖಾಲಿ ಇರುವ ವೈದ್ಯ ಹುದ್ದೆಗಳ ವಿವರ: ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ(2) ಹುದ್ದೆಗಳು, ಶಸ್ತ್ರಚಿಕತ್ಸಾ ತಜ್ಞವೈದ್ಯರ(ಜನರಲ್ ಸರ್ಜನ್-2) ಹುದ್ದೆಗಳು, ಸ್ತ್ರಿ ರೋಗ ತಜ್ಞವೈದ್ಯರ(ಗೈನಿಕಾಲೋಜಿಸ್ಟ-2) ಹುದ್ದೆಗಳು, ಅರವಳಿಕೆ ತಜ್ಞವೈದ್ಯರ(ಅನೆಸ್ಥಿಯಾ-1) ಹುದ್ದೆ, ಚಿಕ್ಕ ಮಕ್ಕಳ ತಜ್ಞವೈದ್ಯರ(ಪಿಡಿಯಾಟ್ರಿಕ್-1) ಹುದ್ದೆ, ಕ್ಷ ಕಿರಣ ತಜ್ಞವೈದ್ಯರ(ರೇಡಿಯೋಲಾಜಿಸ್ಟ-3) ಹುದ್ದೆಗಳು, ನೇತ್ರ ತಜ್ಞವೈದ್ಯರ(ಆಪ್ತಾಲೋಮೊಜಿಸ್ಟ-1) ಹುದ್ದೆ, ಎಲಬು ಕೀಲು ತಜ್ಞವೈದ್ಯರ(ಅರ್ಥೋಪೆಡಿಕ್ ಸರ್ಜನ್-1) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.